← ಇತರೆ

ಸದರವಲ್ಲವೊ ನಿಜಯೋಗ

📂 ಇತರೆ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕಾಫಿ
🥁 ತಾಳ: ಅಟ್ಟ
ಸದರವಲ್ಲವೊ ನಿಜಯೋಗ- ಸಚ್ಚಿದಾನಂದ
ಸದಮಲ ಗುರುದಿಗಂಬರನ ಸಂಯೋಗ ||ಪ||

ಅಡಿಯನಂಬರ ಮಾಡದನಕ- ಅಗ್ನಿ
ಕಿಡಿಯೆದ್ದು ಮೇಲಣ ಕೊಡುನುಕ್ಕದನಕ
ಒಡಲೆರಡೊಂದಾಗದನಕ- ಅಲ್ಲಿ
ಒಡಗೂಡಿ ಅಂಗನೆ ನುಡಿಗೇಳದನಕ ||1||

ನಾಡಿ ಹಲವು ಕಟ್ಟದನಕ ಬ್ರಹ್ಮ
ನಾಡಿಯೊಳು ಪೊಕ್ಕು ಮುಳುಗಾಡದನಕ
ಕಾಡುವ ಕಪಿ ಸಾಯದನಕ- ಸತ್ತ
ಓಡಿನೊಳಗೆ ರಸ ತೊಟ್ಟಿಕ್ಕದನಕ ||2||

ಆದಿಕುಂಭ ಕಾಣದನಕ- ಅಲ್ಲಿ
ಸಾಧಿಸಿ ಭೇದಿಸಿ ಸವಿಯುಣ್ಣದನಕ
ಭೇದವು ಲಯವಾಗದನಕ- ಬಡ
ದಾದಿಕೇಶವ ನಿಮ್ಮ ನೆಲೆಗಾಣದನಕ ||3||
← ಇತರೆ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.