← ಶ್ರೀಶಿವ

ಏಳಯ್ಯ ಪಾರ್ವತೀ ರಮಣ ಪಾವನ ಚರಣ

📂 ಶ್ರೀಶಿವ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಉದಯರಾಗ
ಏಳಯ್ಯ ಪಾರ್ವತೀ ರಮಣ ಪಾವನ ಚರಣ
ಏಳಯ್ಯ ಫಣಿಕುಲಾಭರಣ ಪಾವಕ ನಯನ
ಏಳಯ್ಯ ಬೆಳಗಾಯಿತು ||ಪ||

ಕಮಲ ಸಂಭವ ಮುಖ್ಯ ವಿಮಲ ವಿಶ್ವಾಮಿತ್ರ
ಜಮದಗ್ನಿ ಕಶ್ಯಪ ವಶಿಷ್ಟ ಕಣ್ವಾದಿಗಳು
ಸುಮನ ತತಿ ಬಂದು ಕಾದಿಹರು ಬಾಗಿಲೊಳೀಗ
ಉಮೆಯರಸ ಒಲಿದುಪ್ಪವಡಿಸಯ್ಯ ಹರನೆ ||1||

ಇಂದ್ರ ದಿಕ್ಪಾಲಕರು ಕೂಡಿ ಒಂದೆಶೆಯೊಳಗೆ
ವಂದಿಸುತ ನಾರದನು ಒಲಿದು ಗಾನವ ಪಾಡಿ
ನಂದಿ ಭೃಂಗೀಶರು ನಾಟ್ಯವಾಡುತಲಿಹರು
ಚಂದ್ರಧರ ಒಲಿದುಪ್ಪವಡಿಸಯ್ಯ ಹರಿಯೆ ||2||

ಗರುಡ ಗಂಧರ್ವ ಯಕ್ಷ ಕಿನ್ನರ ಕಿಂಪುರುಷ
ಪರಮ ಪುರುಷರು ನಿನ್ನ ಪಾದವೇ ಗತಿಯೆಂದು
ನಿರುತದಿಂ ಬಂದು ಓಲೈಸುತಿಹರು ತ್ರಿಪುರ
ಹರನೆ ಪಂಪಾಪತಿಯೆ ಏಳಯ್ಯ ಬೆಳಗಾಯಿತು ||3||
← ಶ್ರೀಶಿವ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.