← ಶ್ರೀಹನುಮಂತ

ಹನುಮನ ಮತವೇ

📂 ಶ್ರೀಹನುಮಂತ
✍️ ಪುರಂದರದಾಸ
🏷️ ಕೀರ್ತನೆಗಳು
🎵 ರಾಗ: ಪಹಾಡೀ
🥁 ತಾಳ: ಕವಾಲಿ
ಹನುಮನ ಮತವೇ ಹರಿಯ ಮತವೊ
ಹರಿಯ ಮತವೇ ಹನುಮನ ಮತವೊ ||
ಹನುಮನು ಒಲಿದರೆ ಹರಿ ತಾನೊಲಿವನು |
ಹನುಮನು ಮುನಿದರೆ ಹರಿಯು ಮುನಿವನು ||
ಹನುಮನು ಒಲಿಯೆ ಸುಗ್ರೀವನು ಗೆದ್ದ|
ಹನುಮನು ಮುನಿಯೆ ವಾಲಿಯು ಬಿದ್ದ||
ಹನುಮನು ಒಲಿಯೆ ವಿಭೀಷಣ ಗೆದ್ದ|
ಹನುಮನು ಮುನಿಯೆ ರಾವಣ ಬಿದ್ದ||
ಹನುಮನು ಪುರಂದರವಿಟ್ಠಲನ ದಾಸ |
ಪುರಂದರವಿಟ್ಠಲನು ಹನುಮನೊಳ್ ವಾಸ ||
← ಶ್ರೀಹನುಮಂತ ಪುರಂದರದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.