← ಶ್ರೀಕೃಷ್ಣ

ಹರಿಭಜನೆ ಮಾಡೋ

📂 ಶ್ರೀಕೃಷ್ಣ
✍️ ವಾದಿರಾಜಸ್ವಾಮಿ
🏷️ ಕೀರ್ತನೆಗಳು
🎵 ರಾಗ: ಭೀಮಪಲಾಸೀ
🥁 ತಾಳ: ತ್ರಿತಾಲ
ಹರಿಭಜನೆ ಮಾಡೋ ನಿರಂತರ
ಪರಗತಿಗಿದು ನಿರ್ಧಾರ ನೋಡೋ ||
ಮೊದಲೆ ತೋರುತದೆ ಮಧುರ ವಿಷಯಸುಖ
ಕಡೆಯಲಿ ದುಃಖ ಅನೇಕ ||
ವೇದಶಾಸ್ತ್ರಗಳನೋದಿದರೇನು
ಸಾಧನಕಿದು ನಿರ್ಧಾರ ||
ಸಾರವೋ ಬಹು ಸಂಸಾರ ವಿಮೋಚಕ
ಸೇರೋ ಶ್ರೀ ಹಯವದನನ್ನ ||
← ಶ್ರೀಕೃಷ್ಣ ವಾದಿರಾಜಸ್ವಾಮಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.