← ಶ್ರೀಗುರು

ಯೋಗಿ ಮನೆಗೆ ಬಂದ

📂 ಶ್ರೀಗುರು
🏷️ ಕೀರ್ತನೆಗಳು
🎵 ರಾಗ: ಮೋಹನ
🥁 ತಾಳ: ಆದಿತಾಳ
ಯೋಗಿ ಮನೆಗೆ ಬಂದ ಶ್ರೀ ಗುರುದೇವ ಮನೆಗೆ ಬಂದ |
ಕಾಲಲಿ ಪಾದುಕೆ ಕೈಯಲಿ ದಂಡ ಬಾಲರವಿಯ ಕಳೆಯ ||

ಮಸ್ತಕದಲಿ ಜಟೆ ಶೋಭಿಸುತಲ್ಲಿ |
ಕಸ್ತೂರಿ ತಿಲಕ ಚಂದನ ಹಣೆಯಲ್ಲಿ ವಿಸ್ತರ ನಗುಮುಖದ ||

ಜೋಲುತಿರಲು ಕೊರಳೊಳು ರುದ್ರಾಕ್ಷ |
ಜೋಳಿಗೆ ಬಗಲಲಿ ತ್ರಿಲೋಕ ರಕ್ಷ ಕಾಷಾಯಾಂಬರದ ||

ಕುರುದ್ವೀಪದಿ ಕೃಷ್ಣೆಯ ತಟದಲ್ಲಿ |
ಸರಸದಿ ವಾಸಿಪ ಶ್ರೀಪಾದಯೋಗಿ ಪರಮಪುರುಷ ನೃಹರಿ ||

ಭಕ್ತಕಾಮ ಕಲ್ಪದ್ರುಮನೀತ |
ನಿತ್ಯಪೂರ್ಣ ಸಚ್ಚಿದಾತ್ಮ ದತ್ತ ಶಂಕರ ಗುರುರೂಪ ||
← ಶ್ರೀಗುರು

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.