← ಜಾನಪದ ಗೀತೆ

ತಿಂಗಾಳು ಮುಳುಗಿದವೋ ರಂಗೋಲಿ ಬೆಳಗಿದವೋ

📂 ಜಾನಪದ ಗೀತೆ
🏷️ ಜಾನಪದ ಗೀತೆ
ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
ತಾಯಿ ಚಾಮುಂಡಿಯ ಪೂಜೆಗೆಂದು
ಬಾಳೆ ಬಾಗಿದವೋ ||

ಮಾಯ್ಕಾತಿಚಾಮುಂಡೀ
ಮಂಡೆಲ್ಲಿ ಒದರೀರಿ
ಮೈಸೂರಿಂದಾಚೆ ಬೆಟ್ಟದಲ್ಲಿ
ಬಾಳೆ ಬಾಗಿದವೋ |

ಮೈಸೂರಿಂದಾಚೆ ಚಾಮುಂಡಿಬೆಟ್ಟದಲಿ
ಹೂ ಕಂಡು ಮಂಡೆ ಅಲ್ಲೆ ಒದರಿದರು
ಬಾಳೆ ಬಾಗಿದವೋ ||

ಕರಿಯ ಕಡ್ಡಿಯ ಸೀರೆ
ನರಿಗೆ ಚಿನ್ನದ ಕುಣಿಕೆ
ನಡೆಮುಡಿಯ ಮೇಲೆ ಬರುವವಳೆ
ಬಾಳೆ ಬಾಗಿದವೋ |
ನಡೆಮಡಿಯ ಮೇಲೇ ಬರುವವಳೆ ಚಾಮುಂಡಿ
ದೊರೆಯೆದ್ದು ಕೈಯ ಮುಗಿದಾರೊ
ಬಾಳೆ ಬಾಗಿದವೋ ||

ಕನ್ನ ಕನ್ನಡಿ ಬಂದೊ
ಕಂಚಿನ ಹೆಬ್ಬರೆ ಬಂದೊ

ಸಣ್ಣೇರಿಮ್ಯಾಲೆ ಮಡೆ ಬಂದೊ
ಬಾಳೆ ಬಾಗಿದವೋ |
ಸಣ್ಣೇರಿ ಮ್ಯಾಲೆ ಮಡೆ ಬಂದೊ ಚಾಮುಂಡಿ
ನಿಮ್ಮಡೆಗೆ ತೋದಲು ಬೆಳಗಾದೊ
ಬಾಳೆ ಬಾಗಿದವೋ ||
← ಜಾನಪದ ಗೀತೆ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.