← ಶ್ರೀದೇವಿ

ಹೇ ಆನಂದಮಯಿ

📂 ಶ್ರೀದೇವಿ
🏷️ ಕೀರ್ತನೆಗಳು
🎵 ರಾಗ: ಭೈರವೀ
🥁 ತಾಳ: ಏಕತಾಲ
ಹೇ ಆನಂದಮಯಿ ನೀ ಎನ್ನ
ನಿರಾನಂದ ಗೈಯದಿರು ||
ನಿನ್ನ ಪಾದವನುಳಿದು ಅನ್ಯದಾವುದನು
ಎನ್ನಯ ಮನವು ಕಾಣದು ತಾಯಿ
ಮೃತ್ಯುವು ಬಂದಿಲ್ಲಿ ಸಿಡಿಗುಟ್ಟುತಿಹನು
ತಪ್ಪೆನ್ನದೇನೋ ಅರಿಯೆನು ನಾನು ||
ಭವಾನಿಯೆನ್ನುತ ಭವವ ದಾಟುವೆ
ಎನ್ನುವ ಆಸೆಯು ಇದ್ದಿತು ಮನದಿ |
ತುಂಬಿದ ಕಡಲೊಳು ಮುಳುಗಿಪೆ ಎಂಬುದ
ಕಂಡವನಲ್ಲ ನಾ ಕನಸಿನಲೂ ||
ಹಗಲಿರುಳು ಶ್ರೀದುರ್ಗಾನಾಮವ ನೆಚ್ಚಿ
ತೇಲುತಲಿದ್ದರೂ ತಪ್ಪದೀ ದುಃಖವು |
ಈ ಬಾರಿ ನಾನಿಲ್ಲಿ ಮುಳುಗಿದರಂತೂ
ಜಪಿಸರು ಇನ್ನಾರೂ ನಿನ್ನಯ ನಾಮವ ||
← ಶ್ರೀದೇವಿ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.