← ಶ್ರೀರಾಮಕೃಷ್ಣ

ರಾಮಕೃಷ್ಣ ಕೃಪಾಸಿಂಧು ಸಲಹು

📂 ಶ್ರೀರಾಮಕೃಷ್ಣ
✍️ ಸ್ವಾಮಿ ನಿತ್ಯಸ್ಥಾನಂದ
🏷️ ಕೀರ್ತನೆಗಳು
🎵 ರಾಗ: ಪೂರಿಯಾಧನಾಶ್ರೀ
🥁 ತಾಳ: ಭಜನ್
🎧
ಶ್ರವಣ ಮಾಡಿ
ಸುರಮಣಿ ಶ್ರೀ ದತ್ತಾತ್ರೇಯ ವೇಲಣಕರ
ರಾಮಕೃಷ್ಣ ಕೃಪಾಸಿಂಧು
ಸಲಹು ಹೃದಯದಲ್ಲಿ ನಿಂದು |
ಪರಮ ಬಂಧು ನೀಡು ಇಂದು
ನಿನ್ನ ಪ್ರೇಮದಮೃತ ಬಿಂದು ||

ಸಕಲ ಶಾಸ್ತ್ರ ಸತ್ಯ ಸಾಕ್ಷಿ
ನಿನ್ನ ದಿವ್ಯ ಜೀವನ |
ಸಂತರೆಲ್ಲರನುಭವಗಳ
ನೀನೇ ಪರಮ ಸಂಗಮ ||

ಜಗದ ಪ್ರೀತಿಯೆಲ್ಲ ಕೂಡಿ
ಭಕ್ತಿಯಾಯ್ತು ನಿನ್ನಲಿ |
ದೇವಭಕ್ತಿ ಲೋಕ ಪ್ರೀತಿ
ಒಂದೇ ನಿನ್ನ ಮನದಲಿ ||
← ಶ್ರೀರಾಮಕೃಷ್ಣ ಸ್ವಾಮಿ ನಿತ್ಯಸ್ಥಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.