← ಶ್ರೀಸ್ವಾಮಿ ವಿವೇಕಾನಂದ

ಸೃಷ್ಟಿಯೊಳಧಿಕನು ಮಾನವನು

📂 ಶ್ರೀಸ್ವಾಮಿ ವಿವೇಕಾನಂದ
✍️ ಸ್ವಾಮಿ ನಿತ್ಯಸ್ಥಾನಂದ
🏷️ ಕೀರ್ತನೆಗಳು
🎵 ರಾಗ: ಭೂಪ್
🥁 ತಾಳ: ಭಜನ್
🎧
ಶ್ರವಣ ಮಾಡಿ
ಸೃಷ್ಟಿಯೊಳಧಿಕನು ಮಾನವನು
ದೇವಾಸುರಗಂಧರ್ವರಿಗಿಂತಲೂ
ಮಾನವ ಜನ್ಮ ಮಿಗಿಲು ||

ದಿವ್ಯತೆ ಅವನೊಳಗಡಗಿಹುದು
ಅದುವೆ ಅವನ ನಿಜತಿರುಳು |
ಪಾಪಿಯು ಅವನೆಂಬುದೆ ಪಾಪವು
ಅಮೃತಾನಂದದ ಪಾಲವನು ||

ದಿವ್ಯತೆ ಹೊರಸೂಸುವುದೇ ಗುರಿಯು
ಮುಕುತಿಯ ಧಾಮದ ದ್ವಾರವದು |
ಜ್ಞಾನಕರ್ಮಗಳು ಭಕ್ತಿಯೋಗಗಳು
ಗುರಿಸಾಧನೆಗಿವು ದಿಟಮಾರ್ಗಗಳು ||

ಗ್ರಂಥ ಹೋಮ ಪೂಜಾದಿಗಳೆಲ್ಲವು
ತಿಳಿಯಿರಿ ಗೌಣದ ವಿಷಯಗಳು |
ಜೀವಸೇವೆಯೇ ಪರಶಿವ ಸೇವೆ
ಭವಸಾಗರವನೆ ದಾಟುವ ನಾವೆ ||
← ಶ್ರೀಸ್ವಾಮಿ ವಿವೇಕಾನಂದ ಸ್ವಾಮಿ ನಿತ್ಯಸ್ಥಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.