← ಶ್ರೀಕೃಷ್ಣ
ದೃಷ್ಟಿ ನಿನ್ನ ಪಾದದಲ್ಲಿ ಇಡೋ ಹಾಂಗೆ
ದೃಷ್ಟಿ ನಿನ್ನ ಪಾದದಲ್ಲಿ ಇಡೋ ಹಾಂಗೆ
ದುಷ್ಟ ಜನರ ಸಂಗಗಳ ಬಿಡೋ ಹಾಂಗೆ
ಕೆಟ್ಟ ಮಾತುಗಳಿಗೆ ಕಿವಿ ಕೊಡದ್ಹಾಂಗೆ - ಮನ
ಕಟ್ಟಿಸಯ್ಯ ನಿನ್ನ ಪಾದ ಬಿಡದ್ಹಾಂಗೆ ||
ದಿಟ್ಟನಾಗಿ ಕೈಯನೆತ್ತಿ ಕೊಡೋಹಾಂಗೆ - ಶ್ರೀ
ಕೃಷ್ಣ ನಿನ್ನ ಪೂಜೆಗಳ ಮಾಡೋಹಾಂಗೆ
ಭ್ರಷ್ಟನಾಗಿ ನಾಲ್ವರೊಳಗೆ ತಿರುಗದ್ಹಾಂಗೆ
ಶಿಷ್ಟಜನರ ಸೇವೆಯನು ಮಾಡೋಹಾಂಗೆ ||
ಪುಟ್ಟಿಸಿದ ತಾಯಿತಂದೆಯಲ್ಲೋ ನೀನು
ಹೊಟ್ಟೆಗಾಗಿ ದೈನ್ಯಪಡಲಾರೆ ನಾನು
ಪಟ್ಟೆಪಟ್ಟುವಾಳಿ ಬೇಡಲಿಲ್ಲ ನಾನು
ಗುಟ್ಟು ಅಭಿಮಾನಗಳ ಕಾಯೋ ನೀನು ||
ನಟ್ಟ ನೀರೊಳಗೆ ಈಸಲಾರೆ ನಾನು
ಕಟ್ಟೆಯ ಸೇರಿಸಬೇಕಯ್ಯ ನೀನು
ಕಟ್ಟೆಯ ಕಾಣದೆ ಅಲ್ಲಾಡುವೆ ನಾನು - ಕೈಯ
ಬಿಡುವರೆ ಪುರಂದರವಿಠಲ ನೀನು ||
ದುಷ್ಟ ಜನರ ಸಂಗಗಳ ಬಿಡೋ ಹಾಂಗೆ
ಕೆಟ್ಟ ಮಾತುಗಳಿಗೆ ಕಿವಿ ಕೊಡದ್ಹಾಂಗೆ - ಮನ
ಕಟ್ಟಿಸಯ್ಯ ನಿನ್ನ ಪಾದ ಬಿಡದ್ಹಾಂಗೆ ||
ದಿಟ್ಟನಾಗಿ ಕೈಯನೆತ್ತಿ ಕೊಡೋಹಾಂಗೆ - ಶ್ರೀ
ಕೃಷ್ಣ ನಿನ್ನ ಪೂಜೆಗಳ ಮಾಡೋಹಾಂಗೆ
ಭ್ರಷ್ಟನಾಗಿ ನಾಲ್ವರೊಳಗೆ ತಿರುಗದ್ಹಾಂಗೆ
ಶಿಷ್ಟಜನರ ಸೇವೆಯನು ಮಾಡೋಹಾಂಗೆ ||
ಪುಟ್ಟಿಸಿದ ತಾಯಿತಂದೆಯಲ್ಲೋ ನೀನು
ಹೊಟ್ಟೆಗಾಗಿ ದೈನ್ಯಪಡಲಾರೆ ನಾನು
ಪಟ್ಟೆಪಟ್ಟುವಾಳಿ ಬೇಡಲಿಲ್ಲ ನಾನು
ಗುಟ್ಟು ಅಭಿಮಾನಗಳ ಕಾಯೋ ನೀನು ||
ನಟ್ಟ ನೀರೊಳಗೆ ಈಸಲಾರೆ ನಾನು
ಕಟ್ಟೆಯ ಸೇರಿಸಬೇಕಯ್ಯ ನೀನು
ಕಟ್ಟೆಯ ಕಾಣದೆ ಅಲ್ಲಾಡುವೆ ನಾನು - ಕೈಯ
ಬಿಡುವರೆ ಪುರಂದರವಿಠಲ ನೀನು ||