← ಜಾನಪದ ಗೀತೆ

ನಿಶ್ಚಿಂತನಾಗಬೇಕಂತಿ

📂 ಜಾನಪದ ಗೀತೆ
✍️ ಶಿಶುನಾಳ ಷರೀಫ್
🏷️ ಜಾನಪದ ಗೀತೆ
🎵 ರಾಗ: ಭೀಮಪಲಾಸೀ
🥁 ತಾಳ: ತ್ರಿತಾಲ
ನಿಶ್ಚಿಂತನಾಗಬೇಕಂತಿ। ಬಹು
ದುಶ್ಚಿಂತಿಯೊಳಗ ನೀ ಕುಂತಿ॥।

ಯಾಕೋ ಎಲಾ ನಿನಗ ಭ್ರಾಂತಿ
ನಾಳೆಗಾಗುವೋದೀಗಂತಿ ||

ಆಶಾಪಾಶಗಳ ಬ್ಯಾಡಂತಿ | ಒಳ್ಳೇ
ಮೀಸಲ ನುಡಿ ಮಾತಾಡಂತಿ |
ಭಾಷೆ ಕೊಟ್ಟು ತಪ್ಪಬ್ಯಾಡಂತಿ। ಹರಿ-
ದಾಸರೊಳಗ ಮನ ನೀಡಂತಿ ||

ಅವರನ ಕಂಡರ ಅವರಂತಿ। ಮ-
ತ್ತಿವರನ ಕಂಡರೆ ಇವರಂತಿ |
ಅರಿವು ಅರಿಯದ ತನಗೂ ತಿಳಿಯದ
ಮೂಢನಾಗಿ ಸುಮ್ಮನೆ ಕುಂತಿ ||

ಪೊಡವಿಯೊಳಗ ಶಿಶುನಾಳಂತಿ | ಗುರು
ಗೋವಿಂದ ಯೋಗೀ ಚಿಂತಿ |
ಬಿಡದಾತನ ಸೇವೆ ಮಾಡಂತಿ | ಭವ-
ವಿಲ್ಲದ ಗುರುವಿನ ಕೂಡಂತಿ॥
← ಜಾನಪದ ಗೀತೆ ಶಿಶುನಾಳ ಷರೀಫ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.