← ಶ್ರೀಕೃಷ್ಣ
ಹೃದಯಬೃಂದಾವನದಿ ಬಂದು ಮನೆ ಮಾಡಯ್ಯ
🎧
ಶ್ರವಣ ಮಾಡಿ
ವಿದ್ವಾನ್ ಶ್ರೀ ಗುರುರಾಜ್
ಬೃಂದಾವನ ಸಾರಂಗ -
ಹೃದಯಬೃಂದಾವನದಿ ಬಂದು ಮನೆ ಮಾಡಯ್ಯ ಕಮಲಾಪತೀ
ಓಹೋ, ಭಕ್ತಿಪ್ರಿಯನೆ ನನ್ನ ಭಕ್ತಿಯು ನಿನಗೆ ರಾಧಾಸಖೀ ||
ನನ್ನ ದೇಹವೆ ನಿನ್ನ ನಂದಗೋಕುಲವಯ್ಯ
ನನ್ನ ದೇಹವೆ ನಿನಗೆ ಶ್ರೀ ಯಶೋದೆ |
ನನ್ನ ಮುಕ್ತಿಯ ಬಯಕೆ ಗೋಪನಾರಿಯರಯ್ಯ
ಬಾ ಇಲ್ಲಿ ನೆಲಸಯ್ಯ, ಇದು ನಿನ್ನದೇ ||
ಖಮಾಜ್ -
ಇದನೆತ್ತಿ ಬಿಸುಡಯ್ಯ, ನೋಡು ಬಿದ್ದಿದೆ ಇಲ್ಲಿ
ನನ್ನ ಪಾಪದ ಭಾರ ಗೋವರ್ಧನ |
ಕಂಸಚರರಾಗಿರುವ ಅರಿವರ್ಗಗಳ ಕೊಂದು
ನನ್ನೊಳಗೆ ನೆಲಸಯ್ಯ ಜನಾರ್ದನ ||
ಭೂಪಾಲಿ -
ನನ್ನ ಮನಸಿನ ಬಯಲ ಹುಲ್ಲುಗಾವಲ ಚರಿಸು
ನಿನ್ನ ಕರುಣೆಯ ಕೊಳಲ ಸವಿರಾಗದೊಳಗೆನ್ನ
ಮನದ ಧೇನುವ ನಿನ್ನ ವಶವಪಡಿಸು |
ನನ್ನ ಹೃದಯದ ಕರೆಯ ಯಮುನಾನದೀ ತಟದಿ
ನನ್ನ ಬಯಕೆಯ ವೃಕ್ಷದಡಿಗೆ ನೆಲಸು ||
ಧಾನೀ -
ಅಲ್ಲಿ ಬೃಂದಾವನದಿ ರಾಖಲನ ಪ್ರೇಮವೇ
ನಿನ್ನನೀ ತೆರದಲ್ಲಿ ಬಂಧಿಸಿರಲು |
ಆ ಅಲ್ಲಿ ನನ್ನನೂ ಗೊಲ್ಲನಾಗಿಸು ದೇವ
ಎಂದು ಈ ದಾಶರಥಿ ಬೇಡುತಿಹನು ||
ಹೃದಯಬೃಂದಾವನದಿ ಬಂದು ಮನೆ ಮಾಡಯ್ಯ ಕಮಲಾಪತೀ
ಓಹೋ, ಭಕ್ತಿಪ್ರಿಯನೆ ನನ್ನ ಭಕ್ತಿಯು ನಿನಗೆ ರಾಧಾಸಖೀ ||
ನನ್ನ ದೇಹವೆ ನಿನ್ನ ನಂದಗೋಕುಲವಯ್ಯ
ನನ್ನ ದೇಹವೆ ನಿನಗೆ ಶ್ರೀ ಯಶೋದೆ |
ನನ್ನ ಮುಕ್ತಿಯ ಬಯಕೆ ಗೋಪನಾರಿಯರಯ್ಯ
ಬಾ ಇಲ್ಲಿ ನೆಲಸಯ್ಯ, ಇದು ನಿನ್ನದೇ ||
ಖಮಾಜ್ -
ಇದನೆತ್ತಿ ಬಿಸುಡಯ್ಯ, ನೋಡು ಬಿದ್ದಿದೆ ಇಲ್ಲಿ
ನನ್ನ ಪಾಪದ ಭಾರ ಗೋವರ್ಧನ |
ಕಂಸಚರರಾಗಿರುವ ಅರಿವರ್ಗಗಳ ಕೊಂದು
ನನ್ನೊಳಗೆ ನೆಲಸಯ್ಯ ಜನಾರ್ದನ ||
ಭೂಪಾಲಿ -
ನನ್ನ ಮನಸಿನ ಬಯಲ ಹುಲ್ಲುಗಾವಲ ಚರಿಸು
ನಿನ್ನ ಕರುಣೆಯ ಕೊಳಲ ಸವಿರಾಗದೊಳಗೆನ್ನ
ಮನದ ಧೇನುವ ನಿನ್ನ ವಶವಪಡಿಸು |
ನನ್ನ ಹೃದಯದ ಕರೆಯ ಯಮುನಾನದೀ ತಟದಿ
ನನ್ನ ಬಯಕೆಯ ವೃಕ್ಷದಡಿಗೆ ನೆಲಸು ||
ಧಾನೀ -
ಅಲ್ಲಿ ಬೃಂದಾವನದಿ ರಾಖಲನ ಪ್ರೇಮವೇ
ನಿನ್ನನೀ ತೆರದಲ್ಲಿ ಬಂಧಿಸಿರಲು |
ಆ ಅಲ್ಲಿ ನನ್ನನೂ ಗೊಲ್ಲನಾಗಿಸು ದೇವ
ಎಂದು ಈ ದಾಶರಥಿ ಬೇಡುತಿಹನು ||