← ಶ್ರೀದೇವಿ

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು

📂 ಶ್ರೀದೇವಿ
✍️ ವಚನವೇದ
🏷️ ಕೀರ್ತನೆಗಳು
🎵 ರಾಗ: ಝಿಂಝೋಠಿ
🥁 ತಾಳ: ಝಪತಾಲ
ಎಲ್ಲವೂ ನಿನ್ನಿಚ್ಛೆಯಂತೆ ನಡೆದಿರಲು
ನೀನೆ ಭವಸಾಗರವ ದಾಟಿಸುವ ಹಡಗು |
ನಿನ್ನ ಇಚ್ಛೆಯ ನೀನು ಪೂರೈಸುತಿರಲು
ತಮ್ಮಗೈಮೆಯಿದೆಂದು ತಿಳಿವರೀ ಜನರು ||
ಕೆಸರಿನಲಿ ಸಲಗವನು ಹಿಡಿಯುವಳು ನೀನು
ಹೆಳವನನು ಗಿರಿಯ ತುದಿಗೊಯ್ಯುವಳು ನೀನು |
ಹಲವರಿಗೆ ಬ್ರಹ್ಮಪದವಿತ್ತು ಹಲವರನು
ಭವಜಲಧಿ ಸುಳಿಯೊಳಗೆ ಎಸೆಯುವಳು ನೀನು ||
ನೀನು ಚಾಲಕಶಕ್ತಿ ನಾನೊಂದು ಯಂತ್ರ
ನಾನೊಂದು ಬರಿಯ ಮನೆ ನೀನದರ ಮಂತ್ರ |
ನಾನೊಂದು ರಥವಾಗೆ ನೀನದರ ರಥಿಕ
ನೀ ನಡೆಸೆ ನಾ ನಡೆವೆ ನಿನ್ನದೀ ಲೋಕ ||
← ಶ್ರೀದೇವಿ ವಚನವೇದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.