← ಶ್ರೀಮಹಾಲಕ್ಷ್ಮಿ

ಏನು ಧನ್ಯಳೊ ಲಕುಮಿ

📂 ಶ್ರೀಮಹಾಲಕ್ಷ್ಮಿ
✍️ ಪುರಂದರದಾಸ
🏷️ ಕೀರ್ತನೆಗಳು
🎵 ರಾಗ: ಗೌಡಸಾರಂಗ
🥁 ತಾಳ: ದಾದರಾ
ಏನು ಧನ್ಯಳೊ | ಲಕುಮಿ | ಎಂಥಾ ಮಾನ್ಯಳೋ ||
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳು ||
ಕೋಟಿಕೋಟಿ ಭತ್ಯರಿರಲು
ಹಾಟಕಾಂಬರನ ಸೇವೆ |
ಸಾಟಿಯಿಲ್ಲದೆ ಮಾಡಿ ಪೂರ್ಣ
ನೋಟದಿಂದ ಸುಖಿಸುತಿಹಳು ||
ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು
ಚಿತ್ರಚರಿತನಾದ ಹರಿಯ
ನಿತ್ಯಸೇವೆ ಮಾಡುತಿಹಳು ||
ಸರ್ವತ್ರದಿ ವ್ಯಾಪ್ತನಾದ
ಸರ್ವದೋಷರಹಿತನಾದ
ಶರ್ವವಂದ್ಯನಾದ ಪುರಂದರ
ವಿಟ್ಠಲನ್ನ ಸೇವಿಸುವಳು ||
← ಶ್ರೀಮಹಾಲಕ್ಷ್ಮಿ ಪುರಂದರದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.