📂 ಭಗವಾನ್ ಬುದ್ಧ
✍️ ಸ್ವಾಮಿ ಶಾಸ್ತ್ರಾನಂದ
🏷️ ಕೀರ್ತನೆಗಳು
🎵 ರಾಗ: ಅಸಾವೇರೀ
🥁 ತಾಳ: ತೇವರಾ
ಕರುಣ ಶೀತಲ ಕಿರಣ ಶೋಭಿತ
ತರಣಿ ನಿನ್ನಯ ಚರಣಕೆರಗುವೆ ||
ಕಾಮ ಮೋಹದ ತಮವ ಕಳೆಯಲು
ಪ್ರೇಮ ಜ್ಯೋತಿಯ ಕಾಂತಿ ಬೆಳಗಿಹೆ |
ವಿಷಮ ಶೈತ್ಯದಿ ಭೀತ ಜಗಕೆ
ಸೌಮ್ಯ ಸಮತೆಯ ಸ್ಥೈರ್ಯ ನೀಡಿಹೆೆ ||
ಕರ್ಮಕಾಂಡದ ಕ್ರೌರ್ಯ ಜಡತೆಯಿಂ
ಧರ್ಮಶಾಸ್ತ್ರದ ಶುಷ್ಕವಾದದಿಂ |
ಧರ್ಮಬಾಳ್ವೆಯ ಸಲಹಲೆಂದು
ಧರ್ಮಮೂರುತಿ ಇಳಿದು ಬಂದೆ ||
ಸರ್ವಧರ್ಮದ ಸರ್ವಕರ್ಮದ
ಸರ್ವಸಾರವ ತೆರೆದು ತೋರಿದೆ
ಸರ್ವಸೃಷ್ಟಿ ವಿಮುಕ್ತಿಸಾಧಕ
ಸರ್ವತ್ಯಾಗಿ ಸಾರ್ವಭೌಮ ||
← ಭಗವಾನ್ ಬುದ್ಧ ಸ್ವಾಮಿ ಶಾಸ್ತ್ರಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.