← ಶ್ರೀಕೃಷ್ಣ

ಕಂಗಳಿವ್ಯಾತಕೋ

📂 ಶ್ರೀಕೃಷ್ಣ
✍️ ಶ್ರೀಪಾದರಾಜಸ್ವಾಮಿ
🏷️ ಕೀರ್ತನೆಗಳು
🎵 ರಾಗ: ಭೈರವೀ
🥁 ತಾಳ: ಏಕತಾಲ
ಕಂಗಳಿವ್ಯಾತಕೋ ಕಾವೇರಿರಂಗನ ನೋಡದ ||
ಜಗಂಗಳೊಳಗೆ ಮಂಗಳಮೂರುತಿ
ರಂಗನ ಶ್ರೀಪಾದಂಗಳ ನೋಡದ ||
ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು |
ಚಂದ್ರ ಪುಷ್ಕರಣಿ ಸ್ನಾನವ ಮಾಡಿ
ಆನಂದದಿಂದಲಿ ರಂಗನ ಕಾಣದ ||
ಹರಿಪಾದೋದಕಸಮ ಕಾವೇರಿ
ವಿರಜಾ ನದಿಲಿ ಸ್ನಾನವ ಮಾಡಿ |
ಪರಮ ವೈಕುಂಠ ರಂಗ ಮಂದಿರ
ಪರವಾಸುದೇವನ ನೋಡದ ||
ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರ ಪದಕ |
ತೇರನೇರಿ ಬೀದಿಲಿ ಬರುವ
ರಂಗವಿಟ್ಠಲರಾಯನ ನೋಡದ ||
← ಶ್ರೀಕೃಷ್ಣ ಶ್ರೀಪಾದರಾಜಸ್ವಾಮಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.