← ಶ್ರೀಕೃಷ್ಣ

ಆರಿಗಳವಲ್ಲಾತ್ಮ ಯೋಗಸಿದ್ಧಿ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಶಂಕರಾಭರಣ
🥁 ತಾಳ: ಆಟತಾಳ
ಆರಿಗಳವಲ್ಲಾತ್ಮ ಯೋಗಸಿದ್ಧಿ
ಸೇರಿ ಸುಜ್ಞಾನದಲಿ ಸವಿದುಂಬಗಲ್ಲದೆ ||ಪ||

ರಜಸು-ತಾಮಸವೆಂಬ ರಯವನೆಲ್ಲವ ಕಳೆದು
ಗಜಬಜಿಸುವ ಪಂಚಭೂತಗಳ
ರಜನಿಗೆ ಸಿಲ್ಕದೆ ಪರಬ್ರಹ್ಮನ ಬಲು
ನಿಜವ ತಿಳಿಯಬಲ್ಲ ನಿರ್ವಾಣಗಲ್ಲದೆ ||1||

ಭಿನ್ನ ಭೇದಗಳೆಂಬ ಬಲು ಸಂಶಯ ಕಳೆದು
ತನ್ನೊಳಗೆ ತಾ ತಿಳಿದು ತಾರಕಬ್ರಹ್ಮವ
ಚೆನ್ನಾಗಿ ನೀ ನೋಡು ಚೆಲುವ ಕಂಗಳಿಂದ
ತನ್ನಗ್ನಿಯೊಳಗಿರುವ ಪ್ರೌಢರಿಗಲ್ಲದೆ ||2||

ಅಕಾರ ಉಕಾರ ಮಕಾರ ಎಂತೆಂಬ
ಓಂಕಾರಕೆ ಕೂಡಿ ಎರಡಿಲ್ಲದ
ಸಾಕಾರ ಕಾಗಿನೆಲೆಯಾದಿಕೇಶವನ
ಆಕಾರದೊಡನಾಡುವರಿಗಲ್ಲದೆ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.