← ಶ್ರೀಶಾರದಾದೇವಿ

ಅಲೆದಲೆದು ಅತಿದಣಿದು

📂 ಶ್ರೀಶಾರದಾದೇವಿ
✍️ ಸ್ವಾಮಿ ತದ್ರೂಪಾನಂದ
🏷️ ಕೀರ್ತನೆಗಳು
🎵 ರಾಗ: ಬೃಂದಾವನ ಸಾರಂಗ
🥁 ತಾಳ: ಝಪತಾಲ
ಅಲೆದಲೆದು ಅತಿದಣಿದು ನಲೆಗಾಣ್ದೆ ನಿನ್ನಡಿಗೆ
ಎಲೆ ತಾಯೆ ಕಡೆಗಿಂದು ಬಂದೆಮ್ಮ ಸಲಹು ||
ಕೊನೆಯಿಲ್ಲ ಕೊರೆಯಿಲ್ಲ ಈ ನಮ್ಮ ದುಃಖಕ್ಕೆ
ಮನದಲ್ಲಿ ಬನದಲ್ಲಿ ನೆಮ್ಮದಿಯು ಇನಿತಿಲ್ಲ |
ಜನುಮಗಳು ಕಳೆಕಳೆದು ದುಃಖ ಮಿತಿಮೀರುತಿದೆ
ಜನನಿ ಮಂಗಳಮೂರ್ತಿ ಕಳೆಯೆಮ್ಮ ಕಲುಷಾರ್ತಿ ||
ಪರಮಹಂಸರ ಕರುಣೆರೂಪಿಣಿಯೆ ನೀ ತಾಯೆ
ಪರತನವನರಿಯದಿಹ ಪ್ರೇಮದಂಬುಧಿ ಜಲವ |
ಎರೆದೆಮ್ಮನುದ್ದರಿಸು ಪತಿತಪಾವನೆ ಮಾತೆ
ಸಾರದಾಯಿನಿ ಪರಮೆ ಅಕಳಂಕಚರಿತೆ ||
← ಶ್ರೀಶಾರದಾದೇವಿ ಸ್ವಾಮಿ ತದ್ರೂಪಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.