← ಶ್ರೀಕೃಷ್ಣ

ಇದ್ದೀಯಾ ಶ್ರೀ ಹರಿ ನೀನೊಲಿದು

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಶಂಕರಾಭರಣ
🥁 ತಾಳ: ಆಟತಾಳ
ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ ||ಪ||

ಇದ್ದೀಯಾ ಶ್ರೀಹರಿ ನೀನು- ವೃದ್ಧಿ
ಸಿದ್ಧಿಯ ನಡುವೆ ಪದುಮನಾಭನು- ಅಭಿ
ವೃದ್ಧಿಯಾಗಲು ತಡವೇನು- ಅಹ
ಬುದ್ಧಿಯಾಗಿ ಭಜಿಸುವ ಬಾಳುವೆಗೆ- ಸ
ಮೃದ್ಧಿಯಾಗಿ ಸರ್ವ ಸಿದ್ಧಿಯ ಕೊಡಲಾಗಿ ||1||

ನಂಬಿದ್ದ ಸುಜನರು ಹರಿಯೆ- ಕೆಟ್ಟ
ದೆಂಬ ಸುದ್ದಿಯ ನಾನರಿಯೆ- ಸತ್ಕು
ಟುಂಬ ಎಂಬುದು ಹೊಸಪರಿಯೆ- ಅಹ
ಬೆಂಬಲವಾಗಿ ಸಜ್ಜನರ ಸಲಹುವ- ಕೃ
ಪಾಂಬುಧಿ ಮೂಜಗಕೊಲಿಯಲೋಸುಗ ಬಂದು ಉಲಿಯೆ ||2||

ಶೇಷಗಿರೀಶ ಮದ್ಬಂಧು- ಆದಿ
ಕೇಶವ ಗುರುವೆ ನೀನೆಂದು- ಕೃಷ್ಣ
ಕ್ಲೇಶ ಬಿನ್ನೈಸುವೆ ಇಂದು- ಅಹ
ಆಸೆ ಬಿಟ್ಟು ಪೂಜಿಸುವ ಭಕ್ತರ
ದಾಸನೆಂದು ವೆಂಕಟೇಶ ನೀನೊಲಿದು ಬಂದಿದ್ದೀಯಾ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.