← ಶ್ರೀದೇವಿ

ಜಯ ಜಗದಂಬ ಮಾ

📂 ಶ್ರೀದೇವಿ
🏷️ ಕೀರ್ತನೆಗಳು
🎵 ರಾಗ: ರಾಮಪ್ರಸಾದೀ
🥁 ತಾಳ: ಏಕತಾಲ
ಜಯ ಜಗದಂಬ ಮಾ ಜನನೀ ಶ್ಯಾಮಾ
ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ ||
ಮಮ ಹೃದಯಕಮಲದಿ ವಾಸಿಸು ಮುದದಿ
ಸದಾ ನಿನ್ನ ಪರಮಧ್ಯಾನ ಗೈವೆ ಹೃದಯದಿ |
ನಿನ್ನ ಕಂದ ನಾನು ಕರೆಯುತಿಹೆ
ಲಾಲಿಸೆನ್ನ ಹೇ ರಮಾ |
ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ ||
ಪರಾಶಕ್ತಿರೂಪಿಣೀ ವಿಮುಕ್ತಿದಾಯಿನೀ
ಪರಾಭಕ್ತಿಗಮ್ಯೇ ನೀನು ಭವತಾರಿಣೀ |
ನಿನ್ನ ನಂಬಿ ಕರೆವೆ ನಮನಗೈವೆ
ನಲಿದು ಬಾರೆ ಹೇ ರಮಾ |
ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ ||
← ಶ್ರೀದೇವಿ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.