← ಶ್ರೀಕೃಷ್ಣ

ಕಂಡೆ ಶ್ರೀಹರಿ ದಿವ್ಯಪಾದ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಆನಂದ ಭೈರವಿ
🥁 ತಾಳ: ಆಟತಾಳ
ಕಂಡೆ ಶ್ರೀ ಹರಿ ದಿವ್ಯಪಾದ- ಬ್ರ
ಹ್ಮಾಂಡ ವ್ಯಾಪಕವಾಗಿ ಬೆಳಗುವ ಪಾದ ||ಪ||

ಸಿರಿಯು ಸೇವಿಪ ವರ ಪಾದ- ನಮ್ಮ
ಗರುಡನಿಂದ ಹೊತ್ತು ತಿರುಗುವ ಪಾದ
ತರಳ ಧ್ರುವನ ಕಾಯ್ದ ಪಾದ- ಮುನಿ
ಸುರರು ನಮಿಸುವ ಲಲಿತ ಪಾದ ||1||

ಸರಸಿಜೋದ್ಭವ ವಂದ್ಯ ಪಾದ
ಪುರಹರ ನಮಿತ ಪರಿಪೂರ್ಣ ಪಾದ
ನರಗೆ ಸಾರಥಿಯಾದ ಪಾದ
ಕೌರವ ಮೂಲ ಮುರಿದಿಟ್ಟ ಪಾದ ||2||

ದಿವಿಜರಾಜನಿಗೊಲಿದ ಪಾದ
ಅವಿವೇಕಿ ದಾನವರ ಕೊಂದ ಪಾದ
ಬುವಿ ಗಯಾಪುರ ಶ್ರೇಷ್ಠ ಪಾದ
ಭವ ಹಿಂಗಿಪಾದಿಕೇಶವ ಪಾದ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.