← ಶ್ರೀಹನುಮಂತ
ಕದರ ಮಂಡಲಗಿಯ ಕರುಣಿ ಹನುಮರಾಯ
ಕದರ ಮಂಡಲಗಿಯ ಕರುಣಿ ಹನುಮರಾಯ |ಸದುಗುಣವಂತನೆ ಹಣುವಂತನೆ
ಅಂಜನೆಯ ವರಸೂನು ಆಶ್ರಿತ ಕಾಮಧೇನುಮಂಜುಳ ಗಾನ ಗೀತ ಪರಮ ವಿಖ್ಯಾತ ಸಂಜೀವನವ ತಂದ ವ್ಯೋಮ ಮಾರ್ಗದಿ ಬಂದಅಂಜದ ಗುಣವಂತನೆ ಹಣುವಂತನೆ1
ಶಶಿಧರಾನ್ವಯ ದೂತ ಸೌಮಿತ್ರಿಯ ವರೂಥ ಅಸಮಾಸ್ತ್ರಧೃತವೇದ ಅಮಿತ ಪ್ರಖ್ಯಾತ ಆ ಸುಗ್ರೀವ ಜಾಮಾತ ಮುಖ್ಯ ಪ್ರಾಣನಾಥ ವಿಶಾಲ ಗುಣವಂತನೆ ಹಣುವಂತನೆ 2
ಕ್ಷೋಣಿಯೊಳು ಕನಕದಾಸನ ನೆರಳು ಅನಕ ಏನು ಬಲಿಸಿದೆಯೊ ಔಷಧಿಯ ಕುಣುಕ ನೀನಿದ್ದರೆ ಕನಕ ಪ್ರಾಣ ತೆರಳುವ ತನಕ ಶ್ರೀನಿಧೇ ಆದಿಕೇಶವ ಎನ್ನ ಜನಕ3