← ಶ್ರೀಕೃಷ್ಣ

ಕಷ್ಟಪಟ್ಟರು ಇಲ್ಲ ಕಳವಳಿಸಿದರು ಇಲ್ಲ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಮೋಹನ
🥁 ತಾಳ: ಆಟತಾಳ
ಕಷ್ಟಪಟ್ಟರು ಇಲ್ಲ ಕಳವಳಿಸಿದರು ಇಲ್ಲ
ಭ್ರಷ್ಟ ಮಾನವ ನಿನ್ನ ಹಣೆಬರೆಹವಲ್ಲದೆ ಇಲ್ಲ ||ಪ||

ಸಿರಿವಂತನ ಸ್ನೇಹವ ಮಾಡಿ ನಡೆದರು ಇಲ್ಲ
ಪರಿಪರಿಯಲಿ ವಿದ್ಯೆಯ ಕಲಿತರಿಲ್ಲ
ನರಿಯ ಬುದ್ಧಿಯಿಂದಲಿ ನಡೆದುಕೊಂಡರು ಇಲ್ಲ
ಅರಿಯದೆ ಹಲವ ಹಂಬಲಿಸಿದರು ಇಲ್ಲ ||1||

ಕೊಂಡಾಡಿ ಕಾಡಿ ನೀ ಬೇಡಿಕೊಂಡರು ಇಲ್ಲ
ಕಂಡ ಕಂಡವರಿಗೆ ಕೈ ಮುಗಿದರಿಲ್ಲ
ಗಂಡುಗತ್ತರಿಯನು ಕೊರಳಿಗಿಟ್ಟರು ಇಲ್ಲ- ಪ್ರ
ಚಂಡನಾದರು ಇಲ್ಲ, ಪರಿಹಾಸ್ಯವೆಲ್ಲ ||2||

ಕಟ್ಟಾಳು ಕಡುಜಾಣನಾಗಿ ಪುಟ್ಟಿದರಿಲ್ಲ
ಬೆಟ್ಟವನು ಕಿತ್ತು ತಂದಿಟ್ಟರಿಲ್ಲ
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ
ಕೊಟ್ಟವರಿಗುಂಟು ಕೊಡದವರಿಗಿಲ್ಲ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.