← ಶ್ರೀಕೃಷ್ಣ

ಕೂಸನು ಕಂಡೀರ್ಯಾ ಸುಪ್ರ-ಹ್ಲಾದನ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
ಕೂಸನು ಕಂಡೀರ್ಯಾ ಸುಪ್ರ-ಹ್ಲಾದನ ಕಂಡೀರ್ಯಾ ನಮ್ಮಕೂಸನು ಕಂಡೀರ್ಯಾ

ರಾಕ್ಷಸ ಕುಲದಲಿ ಜನಿಸಿತು ಕೂಸುರಾಧಾಕೃಷ್ಣನ ಭಜಿಸಿತು ಕೂಸುರಾಗ ದ್ವೇಷಗಳ ಬಿಟ್ಟಿತು ಕೂಸುರಾಮ ಪಾದವ ನೆನೆಯುವ ಕೂಸು ||1||

ಘನ ಹರಿ ಕಂಬದಿ ತೋರಿತು ಕೂಸುಗಳಿಸಿತು ಕೃಷ್ಣನ ಪ್ರೇಮವ ಕೂಸುಘನ ಪಂಪಾಲಯದಿ ವಾಸಿಪ ಕೂಸುಗಣೆ ಗೋಪಾಲನ ಪ್ರೀತಿಯ ಕೂಸು||2||

ಪ್ರಸಿದ್ಧ ವ್ಯಾಸರಾಯರೆಂಬ ಕೂಸುಪ್ರವೀಣ ವಿದ್ಯೆಯೊಳೆನಿಸಿದ ಕೂಸುಪ್ರಹ್ಲಾದನೆಂಬುವ ಆಹ್ಲಾದ ಕೂಸುಪ್ರಸನ್ನ ಕಾಗಿನೆಲೆಯಾದಿಕೇಶವನ ಕೂಸು||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.