← ಇತರೆ

ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು

📂 ಇತರೆ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಸೌರಾಷ್ಟ್ರ
🥁 ತಾಳ: ಆಟತಾಳ
ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು
ನೆಂಪು ಬಲ್ಲವರು ಪೇಳಿ ||ಪ||
ಹಂಪೆಯ ವಿರೂಪಾಕ್ಷ ಲಿಂಗನಲ್ಲಿ
ಝಂಪೆಯನಾಡುತಿಹದು ||ಅ||

ಆರು ತಲೆ ಹದಿನಾರು ಕಣ್ಣುಗಳುಂಟು
ಮೂರು ಮೂರು ನಾಲಗೆ
ಬೇರೆ ಹನ್ನೆರಡು ಕಣ್ಣು ಕಿವಿಗಳುಂಟು
ಸೇರಿತು ತೆಂಕಲಾಗೆ ||1||

ಬಲೆಯ ಬೀಸಿದರು ಸಿಕ್ಕದಾ ಮೃಗ
ಜಲದೊಳು ತಾ ನಿಲ್ಲದು
ನೆಲನ ಮೇಲಿರುವುದು ನಿಂತರೆ ಸಾವುದು
ಕುಲದೊಳಗಾಡುತಿಹುದು ||2||

ಸಕಲ ಕಲೆಯು ಬಲ್ಲ ಸೀತಳ ಮಲ್ಲಿಗೆ
ಬೇರೆ ಬೇರೆನಬಹುದು
ಚೆನ್ನಕೇಶವನಲ್ಲಿ ಕೃಪೆಯುಂಟಾದರೆ
ಅಲ್ಲುಂಟು ಇಲ್ಲಿಲ್ಲವೆ ||3||
← ಇತರೆ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.