← ಶ್ರೀಕೃಷ್ಣ

ಕೈಯ ತೋರಿದ ಬಗೆಯ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಶಂಕರಾಭರಣ
🥁 ತಾಳ: ಆಟತಾಳ
ಕೈಯ ತೋರಿದ ಬಗೆಯ, ಅಮ್ಮಮ್ಮ ಯಾದವಗಿರಿ ಕಲ್ಯಾಣಿ ನೀನು

ಸಕಲ ಜನರು ಕಾಣುತಿರಲು
ವಿಕೃತಿ ವತ್ಸರ ಚೈತ್ರ ದ್ವಿತೀಯೇಕಾದಶಿಯೊಳು
ಪ್ರಕಟಿತಾ ಶುಕ್ರವಾರದೊಳು ತನ್ನ
ಭಕುತರಿಗುತ್ಸಾಹ ಸಂಧ್ಯಕಾಲದೊಳು ||1||

ಕಡಗ ಕಂಕಣ ಗೀರುಗಂಧ ಮಿಗೆಕಡು
ಚೆಲುವಿನ ಬಣ್ಣ ಕುಪ್ಪುಸದಿಂದನಡು
ಬೆರಳುಂಗುರದಿಂದ ಕೈಯಬೆಡಗ
ನೋಡಿದ ಜನರಿಗೆ ಪುಟ್ಟಿತಾನಂದ ||2||

ಜನರೆಲ್ಲ ಯದುಶೈಲೋತ್ಸವವ ಕೇಳಿ
ಘನ ಕಾಲದೇಶದಜಿತ ಭಯವ
ನಿಮಗೆ ಬಿನ್ನೈಪೆನು ನಯವ ಕೊಟ್ಟ
ಮನೋಹರುಷದಿ ನಮಗಿತ್ತ ವೈಭವವ ||3||

ಚೆಲುವರಾಯನ ರಥೋತ್ಸವದೀ ತೀರ್ಥ
ಕೊಲಿದು ಗಂಗಾದೇವಿ ಬರುವ ಸಂಭ್ರಮವ
ನೆಲೆಯ ಸರ್ವರಿಗನುಭವವ ಕೋಟಿ
ಮನೋಹರುಷವನ್ನು ನಮಗಿತ್ತ ವೈಭವವ ||4||

ನಿನ್ನ ಮೋಹದ ಕಂದ ನಾನೊ ಕೇಳೆ
ನಿನ್ನೊಮ್ಮೆ ದಿವ್ಯ ಹಸ್ತಂಜವನೀವ
ಚೆನ್ನಿಗ ವರದ ವೆಂಕಟಾದಿಕೇಶವನು
ತನ್ನ ನಂಬಿದ ಭಕ್ತರಾಶ್ರಿತ ಕಾಮಧೇನು ||5||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.