← ಶ್ರೀಕೃಷ್ಣ

ಚೆಲ್ವ ಕಂಗಳ ಚೆಲ್ವಕಾರ ನೋಡ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕಾಂಬೋಧಿ
🥁 ತಾಳ: ಝಂಪೆತಾಳ
ಚೆಲ್ವ ಕಂಗಳ ಚೆಲ್ವಕಾರ ನೋಡ ಬಂದೆ ನಿನ್ನ ಬಳಿ ಸಾರ ಬಂದೆ
ಚಕ್ರಧರ ಧುರಧೀರ ನಾರಸಿಂಹ ನಾನು ಬಂದೆ ನಾನು ಬಂದೆ

ಕಲ್ಲೊಳು ವಿಷಯ ಪುಟ್ಟಿಸಿದನಾ ಶುಭ
ವಲ್ಲದ ದಿವಸದೊಳಿರಾ ನೋಡಿ
ಇಲ್ಲದ ಬಯಲ ನಿಂದೆಯ ಪೊತ್ತು ಶುಕಾ
ಮಲ್ಲರೊಡನೆ ಕಾದಿ ಮಲೆತ ಸಾಲ್ವರ ಕೊಂದು
ಮಡದಿಗೆ ರತ್ನ ತಂದುದರಿಂದ ||1||

ಮಡದಿಯ ಮನೆಯ ಅರ್ಭಕನಾಗಿ ಬಲು
ಗಡಿಯ ದಾನವನ ಕೊಂದನ ಸೂನು
ಬಡನಡುವಿನ ಠಾವಿಗೆ ಸಿಲ್ಕಿ ಸುಖ
ಪಡದಿರೆ ರಾಯನಾ ಹಿಡಿದು ತೋಳು ಕಟ್ಟಿದುದರಿಂದ ||2||

ಮೂಲ ವೃಕ್ಷದಾಲಾರ ಮುಂದೆಯ ದಾನವರಿ
ರ್ದಾಲಯ ದಹಿಪನೆಂಬುದಯ್ಯನ
ಬಲಮಾಡಿ ಬಲಗೆ ಇಂದುರುಹಿದೆ ಕಾಗಿ
ನೆಲೆಯಾದಿ ಕೇಶವ ಖಳನ ಗರ್ಭವಿಚ್ಛನ್ನ
ಪ್ರಹ್ಲಾದಗೆ ಪ್ರಸನ್ನವಾದುದರಿಂದ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.