← ಇತರೆ

ತಡೆಯುತಲಿದೆ ಪುಷ್ಪಮಾಲೆ

📂 ಇತರೆ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಆನಂದ ಭೈರವಿ
🥁 ತಾಳ: ಆಟತಾಳ
ತಡೆಯುತಲಿದೆ ಪುಷ್ಪಮಾಲೆ
ಒಡಲೊಳಗಾತ್ಮನ ವರ ಮಕುಟಾಗ್ರದಿ

ನವರತ್ನಖಚಿತ ಕಿರೀಟ ದೊಡ್ಡಿತು ದಿವ್ಯ
ನವತರ ಕುಸುಮ ದಾಮವು ಕಿರಿದು
ವಿವರ ಬಲ್ಲ ಸದ್ಗುರು ತಮ್ಮ ಉದ್ದೇಶದ
ನವ ವೈಜಯಂತಿಯ ಹಿರಿದಾಗಿ ಭಾವಿಸಿ ||1||

ಸ್ಥಿರ ಮತಿಯೆಂಬ ಆಸನವನು ಅಳವಡಿಸಿ - ತ್ರಿ
ಕರಣವೆಂಬ ತಾಂಬೂಲವನೊಪ್ಪಿಸುತ - ಮಾಯ
ಮರವೆಯೆಂಬ ದಕ್ಷಿಣೆ ಕೊಟ್ಟು - ಮಮ ಭಾವ
ದಿರುವಿನ ತಮವನೋಡಿಸಿ ನಿಂದ ಗುರುದೇವ ||2||

ಅಜ್ಞಾನವೆಂಬ ನಿರ್ಮಾಲ್ಯವನು ಮಾಡಿ
ಸುಜ್ಞಾನವೆಂಬಕ್ಷತೆಯ ಪಣೆಗೆ ಸೂಡಿ
ಪ್ರಜ್ಞಾನವೆಂಬ ದೀವಿಗೆ ಸ್ತಂಭ ಹೂಡಿ
ಪೂಜಿಸಿ ಪ್ರವಿಮಲ ಜ್ಯೋತಿಯ ದೇಶಿಕೋತ್ತಮ ||3||
← ಇತರೆ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.