← ಶ್ರೀಕೃಷ್ಣ

ದಾಸನಾಗಬೇಕು ಸದಾಶಿವನ ದಾಸನಾಗಬೇಕು

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
ದಾಸನಾಗಬೇಕು ಸದಾಶಿವನ ದಾಸನಾಗಬೇಕು
ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ

ಮನದ ಕಲ್ಮಷ ಕಳೆದು - ಮಹಾದೇ-ವನ ಮಹಿಮೆಯ ತಿಳಿದುಇನಿತು ಈ ಜಗವೆಲ್ಲ ಈಶ್ವರಮಯವೆಂದುಘನವಾದ ಮೋಹದ ಗಡಿಯನು ದಾಟುತ ||1||

ತನುವು ಅಸ್ಥಿರವೆನುತ - ತಿಳಿದು ಶಂಕರನ ಹೃದಯವ ಕಾಣುತಘನವಾದ ಇಂದ್ರಜಾಲವ ಮಾಯೆಯೆನುತಬಿನುಗು ಸಂಸಾರದ ಮಮತೆಯ ಬಿಡುತ ||2||

ಆರು ಚಕ್ರದಿ ಮೆರೆವ - ಅಖಂಡನಮೂರು ಗುಣವ ತಿಳಿದುಆರು ಮೂರು ಹದಿನಾರು ತತ್ತ್ವವ ಮೀರಿತೋರುವ ಕಾಗಿನೆಲೆಯಾದಿಕೇಶವನಡಿ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.