← ಶ್ರೀಕೃಷ್ಣ

ನನ್ನವ್ವ ಕಲ್ಲುಬಿಡೆ ಈ ಧ್ರೋತ್ರವ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕಲ್ಯಾಣೀ
🥁 ತಾಳ: ಆದಿತಾಳ
ನನ್ನವ್ವ ಕಲ್ಲುಬಿಡೆ ಈ ಧ್ರೋತ್ರವ
ಚೆನ್ನಾಗಿ ಒಗೆಯಬೇಕು ||ಪ||

ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಗೆ
ಚೆನ್ನಕೇಶವನ ಪ್ರಸಾದಕ್ಕೊದಗಬೇಕು ||ಅ||

ಉಟ್ಟ ಧೋತ್ರವು ಮಾಸಿತು- ಮನದೊಳಗಿರುವ
ದುಷ್ಟರೈವರುಗಳಿಂದ ಕಷ್ಟದುರಿತಗಳು
ಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳು
ಗಟ್ಯಾಗಿ ಒಗೆಯಬೇಕು ||1||

ವೇದವನೋದಬೇಕು ಮನದೊಳಗಿದ್ದ
ಭೇದವ ಕಳೆಯಬೇಕು
ಸಾದರಣೆಯಿಂದ ತಿಳಿದು ನಿಶ್ಚಯವಾಗಿ
ಕ್ರೋಧ ಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ ||2||

ವೇಲಾಪುರದ ಚೆನ್ನಕೇಶವನ ಸೇವೆಗೆ
ಆಲಸ್ಯವನು ಮಾಡದೆ
ಕೋಲ ಹಿಡಿದು ದ್ವಾರಪಾಲಕನಾಗುವೆ
ನೀಲ ಕುಂತಳೆ ಕಲ್ಲ ಬಿಟ್ಟು ಆ ಕಡೆ ಸಾರೆ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.