← ಶ್ರೀಕೃಷ್ಣ

ನೀನೇನು ಮಾಡಲಾಪೆ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಪಂತುವರಾಳಿ
🥁 ತಾಳ: ಛಾಪುತಾಳ
ನೀನೇನು ಮಾಡಲಾಪೆ
ನಾನು ಮುನ್ನ ಜನ್ಮ ಪಡೆದಲ್ಲದೆ ರಂಗ ||ಪ||

ನಾನಾ ಜನುಮದಿ ಬಹು ಯೋನಿ ಮುಖದಲಿ ಬಾಹ
ಹೀನತ್ವವನು ನೀನು ಕಳೆಯಲಾಪೆಯ
ನಾನು ನನ್ನದು ಎಂಬ ಅಹಂಕಾರವಿರೆ ನಿನ್ನ
ಧ್ಯಾನಿಸಲು ಬುದ್ಧಿಯ ಕೊಡಲಾಪೆಯ ||1||

ಸಂಚಿತವಾಗಿರುವ ಪ್ರಾರಬ್ಧದೊಳಗೊಂದು
ಕಿಂಚಿತಾದರು ನೀನು ಕಳೆಯಲಾಪೆಯ
ಪಂಚೇಂದ್ರಿಯಂಗಳು ದೆಸೆದೆಸೆಗೆ ಎಳೆವಾಗ
ವಂಚನೆ ಇಲ್ಲದೆ ನೀನಡ್ಡ ಬರಲಾಪೆಯ ||2||

ಸರಸಿಜೋದ್ಭವಗೆ ಬುದ್ಧಿಯ ಪೇಳಿ ಪಣೆಯೊಳು
ಬರೆದ ಬರೆಹವನು ನೀನು ತೊಡೆಯಲಾಪೆಯ
ಪರಬ್ರಹ್ಮ ಕಾಗಿನೆಲೆಯಾದಿಕೇಶವ ನಿನ್ನ
ಸ್ಮರಣೆಗೆಯ್ಯಲು ಕಾಯದಿರಲಾಪೆಯ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.