← ಶ್ರೀಕೃಷ್ಣ

ನೆನೆಯ ಬಾರದೆ ಮನವೆ ಪರಮಪಾವನನ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಮುಖಾರಿ
🥁 ತಾಳ: ಆಟತಾಳ
ನೆನೆಯ ಬಾರದೆ ಮನವೆ ಪರಮಪಾವನನ ||ಪ||

ಸಾಕಾರದಿಂದ ಸರ್ವರನು ರಕ್ಷಿಪನ
ಜೋಕೆಯಲಿ ತನ್ನ ನೆನೆವವರ ಪಾಲಿಪನ- ಆ
ನೇಕ ಮೂರುತಿ ಸೂರ್ಯನಾರಾಯಣನ ||1||

ಬ್ರಹ್ಮಾಂಡ ಕೋಟಿ ತಿಮಿರವ ಗೆಲುವವನ
ಒಮ್ಮೆ ನೆನೆಯಲು ಪ್ರಸನ್ನನಾದವನ
ಧರ್ಮಕ್ಕೆ ಸಾಕ್ಷಾತ್ ರೂಪಾಗಿ ತೋರುವನ
ನಿರ್ಮಲಾತ್ಮಕವಾಗಿ ಥಳಥಳಿಸುವವನ ||2||

ಹರಗೆ ನಯನವಾಗಿ ಮಕುಟವ ಬೆಳಗುವನ
ತರುಣಿಯೈವರ ಲಜ್ಜೆ ಕಾಯ್ದವನ
ದುರಿತಕೋಟಿಗಳನುದ್ಧರಿಸುವವನ
ಪರಬ್ರಹ್ಮ ಕಾಗಿನೆಲೆಯಾದಿಕೇಶವನ
ಮರೆಯದೆ ಭಜಿಪರ ಕಾಯುವವನ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.