← ಶ್ರೀಕೃಷ್ಣ

ಪರಮಪದವಿಯನೀವ ಗುರುಮುಖ್ಯ ಪ್ರಾಣನ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
ಪರಮಪದವಿಯನೀವ ಗುರುಮುಖ್ಯ ಪ್ರಾಣನಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ

ಅಂದು ತ್ರೇತಾಯುಗದಿ ಹನುಮನಾಗವತರಿಸಿಬಂದು ದಾಶರಥಿಯ ಪಾದಕೆರಗಿಸಿಂಧುವನು ದಾಂಟಿ ಮುದ್ರಿಕೆಯಿತ್ತು ದಾನವರವೃಂದಪುರ ದಹಿಸಿ ಚೂಡಾಮಣಿಯ ತಂದವನ||1||

ದ್ವಾಪರಯುಗದಲಿ ಭೀಮಸೇನನೆನಿಸಿಶ್ರೀಪತಿಯಪಾದ ಕಡು ಭಜಕನಾಗಿಕೋಪಾವೇಶದಲಿ ದುಶ್ಶಾಸನನನು ಸೀಳಿಭೂಪನ ಜಲದೊಳಗೆ ಕರೆಕರೆದು ಜರೆದವನ ||2||

ಕಲಿಯುಗದಲಿ ತುರೀಯಾಶ್ರಮವನೆ ಧರಿಸಿಕಲುಷದ ಮಾಯಿಗಳನೆ ಸೋಲಿಸಿಖಿಲವಾದ ಮಧ್ವಮತವನು ಬಲಿದೆನಿಸಿ ಕಾಗಿನೆಲೆಯಾದಿಕೇಶವನೆ ಪರದೈವನೆಂದವನ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.