← ಇತರೆ

ಪೋಗದೋ ಛಳಿ ಪೋಗದೋ

📂 ಇತರೆ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಪೂರ್ವೀ
🥁 ತಾಳ: ಮುಟ್ಟೆತಾಳ
ಪೋಗದೋ ಛಳಿ ಪೋಗದೋ ||ಪ||

ಹಳೆಯ ಹಚ್ಚಡ ಸಕಲಾತಿ ಚಿಮ್ಮುರಿ ಟೊಪ್ಪಿಗೆ
ಬಿಳಿಯ ಕಂಬಳಿ ಪೊದ್ದರೆ ಪೋಗದೋ
ನಳಿನಾಕ್ಷಿಯ ತನ್ನ ತೊಡೆಯ ಮೇಗಡೆ ಇಟ್ಟು
ಕಳಸಕುಚದ ಮೇಲೆ ಕೈಯಿಕ್ಕಿದಲ್ಲದೆ ||1||

ಬಡನಡುವಿನ ಬಟ್ಟಕುಚದ ಕಾಮಿನಿರನ್ನೆ
ಬೆಡಗಿನಲಿ ನಗುತ ನಲ್ಲನ ಬಳಿಗೆ ಬರಲು
ಒಡನೆಯೆ ಮೋಹದಿಂ ಪಿಡಿದೆತ್ತಿ ಲಲನೆಯ
ನಡುಮಂಚದ ಮೇಲೆ ಕೆಡಹಿಕೊಂಡಲ್ಲದೆ ||2||

ಛಳಿಗಾರದೆ ವಿಷ್ಣು ಛಳಿಗಾರದೆ ಶಿವ
ಘಳಿಲನೆ ಗಂಗೆಯ ಬೀಸಾಡಲು
ಛಳಿಯ ಕಾರಣವೇನು ನೆಲೆಯಾದಿ ಕೇಶವ
ತಿಳಿದು ನೀ ಹೇಳಯ್ಯ ಛಳಿಯ ವಿವರವನು ||3||
← ಇತರೆ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.