← ಶ್ರೀಕೃಷ್ಣ

ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ

📂 ಶ್ರೀಕೃಷ್ಣ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ದ್ವಿಜಾವಂತಿ
🥁 ತಾಳ: ಆದಿತಾಳ
ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ ||ಪ||

ವೇದ ವಾದಗಳಲ್ಲಿ
ಕಾದುವ ಜನರಲ್ಲಿ
ಓದುವ ವಿದ್ಯೆಗಳಲ್ಲಿ
ವಾದವ ಗೆಲಿಸಯ್ಯ ||1||

ಆರು ವೈರಿಗಳಲ್ಲಿ
ಅಷ್ಟ ಗಜಂಗಳಲ್ಲಿ
ಮೂರು ಏಳರಲ್ಲಿ
ಮುಂದೆ ನೀ ಗೆಲಿಸಯ್ಯ||2||

ಪರಮ ಭಕ್ತಿಯೊಳ್ನಿನ್ನ
ಚರಣಕೆರಗುವೆ ಮುನ್ನ
ಸಿರಿಯ ಪಾಲಿಪ ಚೆನ್ನ
ವರದ ಕೇಶವ ರನ್ನ ||3||
← ಶ್ರೀಕೃಷ್ಣ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.