← ಶ್ರೀಮಹಾಲಕ್ಷ್ಮಿ

ಯಾಕೆಲೊ ರಂಗ ನಿನಗಿಂತು ನಟನೆಯ ಮಾತು

📂 ಶ್ರೀಮಹಾಲಕ್ಷ್ಮಿ
✍️ ಕನಕದಾಸ
🏷️ ಕೀರ್ತನೆಗಳು
🎵 ರಾಗ: ಕಾಂಬೋಧಿ
🥁 ತಾಳ: ಝಂಪೆತಾಳ
ಯಾಕೆಲೊ ರಂಗ ನಿನಗಿಂತು ನಟನೆಯ ಮಾತು ||ಪ||
ಮಾಕಾಂತ ಕರೆಸಿದರೆ ಬಾರದಿಹ ಪೊಗರು ||ಅ||

ಗೊಲ್ಲತನವಂ ಬಿಡಿಸಿ ಗೋಗಾವ ಡಿಂಬ್ಹರಿಸಿ
ಉಳ್ಳ ತಸ್ಕರ ಬುದ್ಧಿ ಕಡೆಗೆ ಇರಿಸಿ
ಬಾಲಕನ ವಂದರಿಸಿ ಬಹು ಭಾಗ್ಯವಂತನೆನಿಸಿ
ಎಲ್ಲರೊಳು ಸಲಿಗೆ ನಿಲಿಸಿದಳೊ ನಿಮ್ಮರಸಿ ||1||

ಕೆಸರ ಚೊಗೆಯಂಬಿಡಿಸಿ ಗುಂಜ ಸರವಂ ತೆಗಿಸಿ
ಬಿಸರುಹ ಮಣಿಮಾಲೆ ಕಡೆಗೆ ಇಡಿಸಿ
ಪೊಸ ಪೀತಾಂಬರ ಉಡಿಸಿ ನವರತ್ನವಂ ತೊಡಿಸಿ
ವಸುಧೆಯೊಳು ಮಿಗಿಲಾಗಿ ನಿಲಿಸಿದಳೊ ನಮಿಸಿ ||2||

ಎನ್ನ ಮಾತನು ಕೇಳು ಮುನಿಸು ಕೃತ್ಯವ ಸೀಳು
ಇನ್ಯಾಕೆ ಯೋಚನೆ ಫಲವ ಪೇಳು
ಬಿನ್ನಹವನು ಕೇಳು ನೆರೆಗೂಡಿ ಸುಖಬಾಳು
ಚೆನ್ನ ಬಾಡದಾದಿಕೇಶವ ದಯಾಳು ||3||
← ಶ್ರೀಮಹಾಲಕ್ಷ್ಮಿ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.