← ಶ್ರೀರಾಮಾನುಜಾಚಾರ್ಯ

ರಾಮಾನುಜರೇ ನಮೋ ನಮೋ

📂 ಶ್ರೀರಾಮಾನುಜಾಚಾರ್ಯ
✍️ ಕನಕದಾಸ
🏷️ ಕೀರ್ತನೆಗಳು
ರಾಮಾನುಜರೇ ನಮೋ ನಮೋಸ್ವಾಮಿ ಲಕ್ಷ್ಮಣ ರೂಪ ನಮೋ ನಮೋ

ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾನಿಡುಶಿಖಿ ಯಜ್ಞೋಪವೀತದಿಂದತೊಡೆದ ದ್ವಾದಶನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ ನಮೋ ||1||

ಪಂಕಜನಾಭನ ಪಾವನ ಮೂರುತಿಶಂಕೆಯಿಲ್ಲದೆ ನೆನೆವರ ಪಾಲಿಪನೆಮುಂಕೊಂಡು ಶ್ರುತಿಮತ ಚಾರ್ವಾಕರ ಗೆದ್ದಓಂಕಾರ ಮೂರುತಿ ನಮೋ ನಮೋ ||2||

ಕೇಶವ ಪಾದಾಂಬುಜ ಮಧುಕರಾಪಾಷಂಡ ಗರ್ವಹರ ಗುರುತಿಲಕಶೇಷಾವತಾರಿ ಮುನೀಶವಂದಿತ ಆದಿಕೇಶವ ಮೂರುತಿ ನಮೋ ನಮೋ ||3||
← ಶ್ರೀರಾಮಾನುಜಾಚಾರ್ಯ ಕನಕದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.