← ಶ್ರೀನರಸಿಂಹ

ಅನಂತಗಿರಿ ಯಾತ್ರೆ ಮಾಡಿ

📂 ಶ್ರೀನರಸಿಂಹ
✍️ ವಿಜಯದಾಸ
🏷️ ಕೀರ್ತನೆಗಳು
ಅನಂತಗಿರಿ ಯಾತ್ರೆ ಮಾಡಿ ಜನರು
ಅನಂತ ಜನುಮದ ಪಾಪ ಸಂಹರವು
ಇಲ್ಲಿ ಕುರುರಾಯ ಜನ್ಮಾಂತರದು ಪಾಪ
ನಿಲ್ಲದೆ ಮಾಡಿದಾ ನಡತಿಯಿಂದಾ
ಎಲ್ಲ ಕಾಲದಲಿ ದರಿದ್ರನಾಗಿದ್ದು ಶ್ರೀ
ವಲ್ಲಭನ ಒಲಿಸಿ ಮುದಂಬರೀಷ ನೃಪನಾದಾ ||1||

ಚಂಡಶಾಸನನೆಂಬ ನೃಪತಿ ದುರ್ಮತಿಯಲಿ
ಮಂಡಲದೊಳಗಿರಲು ಸರ್ಪ ಕಚ್ಚಿ
ಕಂಡು ಗೃಧ್ರವು ಅವನ ಉಂಗುಷ್ಟ ಭವನಾಶಿ
ಕುಂಡದಲಿ ಬಿಸುಡೆ ದಶರಥ ಭೂಪತಿಯಾದಾ||2||

ಹೇಳಲಳವೆ ಇನ್ನು ಈ ಕ್ಷೇತ್ರದ ಮಹಿಮೆ
ಕೇಳಿದಾಕ್ಷಣ ಮುಕ್ತಿ ಸಿದ್ಧವಕ್ಕೂ
ಶ್ರೀಲೋಲ ನರಸಿಂಹ ವಿಜಯವಿಠ್ಠಲರೇಯೇನ
ವಾಲಗವ ಕೈಕೊಂಡ ಮನುಜಂಗೆ ಬಲು ಸಾಧ್ಯ ||3||
← ಶ್ರೀನರಸಿಂಹ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.