← ಶ್ರೀಕೃಷ್ಣ

ಆನಂದಾ ಆನಂದಾ ಮತ್ತೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಆನಂದಾ ಆನಂದಾ ಮತ್ತೆ ಪರಮಾನಂದಾ
ಆನಂದನನಂದನೊಲಿಯೆ ಏನಂದದ್ದೆ ವೇದ ವೃಂದಾ
'ಅ'ಮೊದಲು 'ಕ'್ಷ ಕಾರಾಂತ ಈ ಮಹಾವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||1||

ಪೋಪದು ಬರುತಿಪ್ಪುದು ಕೋಪಶಾಣಿ ಮಾಡುವುದು
ರೂಪ ಲಾವಣ್ಯವು ಹರಿವ್ಯಾಪಾರವೆಂದವರಿಗೆ ||2||

ಜಲ ಕಾಷ್ಠ ಶೈಲ ಗಗನ ನೆಲ ಪಾವಕ ವಾಯು ತರು
ಫಲಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ ||3||

ತಾರೊ ಬಾರೊ ಬೀರೊ ಸಾರೊ ಮಾರೊ ಕೋರೊ ಹಾರೊ
ಹೋರೊ ಸೇರೊ ಕೋರೊದೆಂಬ ದಿಶಾಪ್ರೇರಣೆ ಎಂದವರಿಗೆ ||4||

ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ
ಸಿದ್ಧ ವಿಜಯವಿಠ್ಠಲನ ಪೊಂದಿ ಕೊಂಡಾಡುವವರಿಗೆ ||5|
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.