← ಶ್ರೀಕೃಷ್ಣ

ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ ಕು- |
ಮಾರ ಮೌನದಲಿದ್ದಿ ಮಾತನಾಡಯ್ಯಾ

ಇಂದಿರಾ ಭೂದೇವಿ ಆಳಿದವನೊ |
ನಂದ ಗೋಕುಲದಲ್ಲಿ ಪುಟ್ಟಿದವನೊ ||
ಮಂದಿರ ವೈಕುಂಠ ಶ್ರೀನಿವಾಸನೊ | ಕರಿ - |
ಬಂಧನ ವಿನಾಶದ ವಿಠ್ಠಲನೊ ||1||

ಅಂಬರೀಷನ ಶಾಪ ಪರಿಹರನೊ |
ಶಂಭು ಮೊರೆಯಿಡಲು ಕಾಯಿದವನೊ ||
ಕಂಭದಿಂದೊಡೆದು ಬಂದವನೊ | ತ್ರಿ -
ಯಂಬಕನ ಭಕ್ತನ ಸಂಹರನೊ ||2||

ಬೆರಳಲ್ಲಿ ಬೆಟ್ಟವನೆತ್ತಿದವನೊ |
ದುರುಳ ಕಾಳಿಂಗನ ತುಳಿದವನೊ ||
ಒರಳನು ಕಾಲಲ್ಲಿ ಎಳೆದವನೊ |
ಚೆಲ್ವ ಸಿರಿ ವಿಜಯವಿಠ್ಠಲರಾಯನೊ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.