← ಶ್ರೀರಾಮ

ಇದೇ ರಾಮನಿಧಿ ನೋಡು ಎದುರಿಗಿರುತಿರೆ

📂 ಶ್ರೀರಾಮ
✍️ ವಿಜಯದಾಸ
🏷️ ಕೀರ್ತನೆಗಳು
ಇದೇ ರಾಮನಿಧಿ ನೋಡು ಎದುರಿಗಿರುತಿರೆ
ಹೃದಯವೆಂಬೊ ಸದನದಲ್ಲಿ ಕದವು ತೆಗೆದಿದೆ

ದಾರಿಯಲ್ಲಿ ಆರು ಛತ್ರ ಭೂರಿ ಭೋಜನ
ಊರೊಳಲ್ಲಿ ಪ್ರಣವ ಶಬ್ದ ಭೋರೆಗುಟ್ಟುತ
ನೂರು ಕೋಟಿ ಸೂರ್ಯ ಕಿರಣ ತೋರುವಾ ಪ್ರಭೆ
ಸೂರೆ ಮಾಡಿಕೊಳ್ಳಿರೋ ಪಾರವಿಲ್ಲದಾ ||1||

ಅಷ್ಟದಳದ ಮಂಟಪದ ಪೆಟ್ಟಿಗೆಯಲೀ
ಸೃಷ್ಟಿಗೊಡೆಯ ಹರಿಯ ನಾಮ ಅಂಕಿತವಾದ
ಕಟ್ಟಳೆಯಿಲ್ಲದ ನಾಣ್ಯಗಳನು ಕಟ್ಟರೀಸಿದೆ
ಹುಟ್ಟ ತಿರುಕರೆಲ್ಲ ಬಂದು ಕಟ್ಟಕೊಳ್ಳಿರೋ ||2||

ಅಂಕೆ ಮಾಡುವರಿಲ್ಲವಿದಕೆ ಶಂಕೆ ಬ್ಯಾಡಿರೋ ಅ-
ಹಂಕೃತಿಯ ತೊರೆದು ಕಾಲ್ಗೆ ಗೆಜ್ಜೆ ಕಟ್ಟಿರೋ
ಶಂಖ ತಾಳ ಮದ್ದಳೆಯು ಝೇಂಕೃತಿಯಿಂದಾ
ವೆಂಕಟಾಚಲ ನಿಲಯಕಾಯೊ ವಿಜಯವಿಠ್ಠಲ ||3||
← ಶ್ರೀರಾಮ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.