← ಶ್ರೀಕೃಷ್ಣ

ಇದೇ ಸಮಯ ಹರಿಯೇ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಇದೇ ಸಮಯ ಹರಿಯೇ ಇದೇ ಸಮಯ
ನಿನ್ನ ಪದ ಕಮಲ ತೋರಿ ಸದಾ |

ಬಿಡದೆ ಎನ್ನ ಮುದದಿ ಪೊರೆವುದಕೆ ಅ.ಪ
ನಾನಾ ಯೋನಿಯಲಿ ಬಂದು ಜ್ಞಾನ ದುರ್ಲಭನಾಗಿ |
ಹೀನನಾದವಗೆ ಸುಜ್ಞಾನ ಪಾಲಿಸುವುದಕೆ ||1||

ಆಶಾಪಾಶಕೆ ಸಿಲುಕಿ ಶ್ರೀಶನ ಮರೆತೆನೋ |
ಲೇಸು ದಾರಿಯ ತೋರಿ ದಾಸನ ಕಾಯುವುದಕೆ ||2||

ಸಂತರ ಸಂಗವ ಸಂತತ ಪಾಲಿಸಿ
ಅಂತರಂಗದಿ ನಿನ್ನ ಚಿಂತನೆ ಕೊಡುವುದಕೆ ||3||

ಹಿಂದಿನ ಸುಕೃತದಿ ಬಂದೆ ಭೂಸುರನಾಗಿ |
ಮುಂದಿನ ಪದಕ್ಕಾಗಿ ಕುಂದದೆ ಸಲಹುವುದಕೆ ||4||

ಶ್ರೀ ಪತಿ ವಿಜಯವಿಠ್ಠಲ ವೆಂಕಟ |
ತಾಪವ ಕಳೆದೆನ್ನ ಕಾಪಾಡುವುದಕೆ ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.