← ಶ್ರೀಕೃಷ್ಣ

ಎಂದೊಡನಾಡುವೆ ಎಂದರ್ಥಿಬಡುವೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಎಂದೊಡನಾಡುವೆ ಎಂದರ್ಥಿಬಡುವೆ
ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ

ಉತ್ಸವ ಮಂಟಪದೊಳಗೆ ಕುಳಿತು ಭಕ್ತ
ವತ್ಸಲನೆಂದು ನುತಿಸಿಕೊಂಬನ ಕೂಡ ||1||

ಸಕಲ ಭೂಷಿತನಾಗಿ ಅಜಹರ ಸುರಮುನಿ
ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ ||2||

ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ
ಆ ಪುರೋಹಿತರಿಂದ ಕಲಿತುಕೊಂಬನ ಕೂಡ ||3||

ನಾಲ್ವತ್ತುಮೂರು ಪದಂಗಳು ಮಾಡೆಂದು
ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ ||4||

ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ
ಮಂಡೆಯಲ್ಲಿಟ್ಟ ಮಹಮಹಿಮನ ಕೂಡ ||5||

ಪಲ್ಲಕ್ಕಿ ಏರಿ ಪವಳಿಯ ಸುತ್ತಿ
ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ||6||

ವಾರಶನಿ ಚತುರ್ದಶಿ ಕೃಷ್ಣಪುಷ್ಯದಿ
ಈ ರೀತಿಯಲಿ ಕೂಡ ಇಂದಿರೇಶನ ಕೂಡ ||7||

ರೌದ್ರಿ ಸಂವತ್ಸರ ಅರ್ಧರಾತ್ರಿಯಲಿ
ಭದ್ರ ಮೂರುತಿಯಾದ ಭವಹರ ಕೂಡ ||8||

ಗುರುಪುರಂದರ ಉಪದೇಶನ ಬಲದಿಂದ
ಸಿರಿ ವಿಜಯವಿಠ್ಠಲನ ಚರಣ ತಕ್ರ್ಕೈಸಿ ||9||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.