← ಶ್ರೀಕೃಷ್ಣ

ಎಚ್ಚರಿಕೆ ಎಚ್ಚರಿಕೆ ಎಲೋ ದೇವ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಎಚ್ಚರಿಕೆ ಎಚ್ಚರಿಕೆ ಎಲೋ ದೇವ |
ಎಚ್ಚರಿಕೆ ಎಚ್ಚರಿಕೆ |
ಅಚ್ಚ ಕಲ್ಯಾಣ ಮೂರುತಿ ತಿರುವೆಂಗಳಾ

ಅಜ ದ್ವಿಜಗಜ ಅಜಾಮಿಳ ಪರಿಪಾಲನೆಯಾ |
ದ್ವಿಜ ರಾಜಾಂಗಾ ಗಂಗಜ ಭಕ್ತವರದನೆಯಾ |
ಗಜ ಕುಜ ದನುಜ ಭೂ ಭುಜರ ಸಂಹಾರನೆಯಾ |
ನಿಜ ಭಜಕರ ಪಂಕಜ ಹೃದಯಾರ್ಕನೆಯಾ||1||

ಪರತರ ಪರಮಾತ್ಮ ಪರಮೇಷ್ಠಿ ವಂದನೆಯಾ |
ಕರುಣ ಶರಧಿ ತಾರಾ ಕರುಗಳ ಕಾಯಿದನೇಯಾ |
ಎರಡೇಳು ಲೋಕ ಪೊರೆವಾ ಭಾರಣ ಹರಿಯಾ |
ಶರಣು ಹೊಕ್ಕೆನು ಎನ್ನ ಮೊರೆ ವಿಚಾರಿಸೊಯಾ ||2||

ಜಯ ಜಯಾ ಚಿತ್ತಾವಾಧಾರು ಪರಾಕ್ರಮಯಾ |
ಭಯ ನಿವಾರಣ ನಿಜ ಭಂಟರಿಗೆ ಬಂಟಯಾ |
ನಯ ಮೂರುತಿ ನಮ್ಮ ವಿಜಯವಿಠ್ಠಲರೇಯಾ ಯಾ |
ತ್ರಿಯಗುಣ ವಿರಹಿತ ಶೇಷಗಿರಿವಾಸಯಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.