← ಶ್ರೀಕೃಷ್ಣ

ಏಕಾಂತದಲಿ ಬಂದು ಮಾತು ನುಡಿದೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಏಕಾಂತದಲಿ ಬಂದು ಮಾತು ನುಡಿದೆ ಶ್ರೀ |
ಕಾಂತ ನಿನಗಿದು ಸುಲಭವಾಗಿದೆ ನೋಡು

ಪರಧನವನಪಹರಿಸಿಕೊಂಡು ಬೆಳೆದು ಇದ್ದ |
ವರ ಮನೆಯೊಳಗಡಲೇತಕೆ |
ನಿರುತ ಎನ್ನ | ಹೃದಯವೆಂಬೊ ಗಾಡಾಂಧಕಾರ |
ಭರಿತವಾಗಿದೆ ಇಲ್ಲಿ ಅಡಗಬಾರದೆ ಬಂದು ||1||

ಕೇವಲ ಹಕ್ಕಲದ ವನದೊಳು ಪೊಕ್ಕು ಬೇಟೆ |
ದೇವ ಆಡುವರೆ ನೀ ಹುಡಿಕಿ ಹುಡಿಕಿ|
ಕಾವಲಾರಣ್ಯ ಇಲ್ಲಿ ವಿಂಡೂ ತುಂಬಿದೆ |
ಸಾವಧಾನದಿ ಬೇಟೆ ಆಡಬಾರದೆ ಬಂದು ||2||

ವೈಕುಂಠ ಮೂರು ಸ್ಥಾನದಲಿ ಮುಕ್ತರಿಗೆ |
ಬೇಕಾದದೀಯಾಬೇಕು ಕಡಿಮೆ ಇಲ್ಲಾ |
ನೀ ಕೇಳು ಎನ್ನಲ್ಲಿ ಸರಿ ಬಂದಂತೆಯಲ್ಲದೆ |
ವಾಕು ಪೇಳುವೆ ನಿಲ್ಲು ವಿಜಯವಿಠ್ಠಲ ಬಂದು||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.