← ಶ್ರೀಕೃಷ್ಣ

ಏನು ಪೇಳಲಿ ತೀರ್ಥಪತಿಯ ಮಹಿಮೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಏನು ಪೇಳಲಿ ತೀರ್ಥಪತಿಯ ಮಹಿಮೆ
ಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ

ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದು
ದೇಶದೊಳು ಪುಸಿಯಲ್ಲ ಸಿದ್ಧವೆನ್ನಿ
ಈಶನುಪದೇಶದಿಂದಲಿ ವಿಗತ ಜನನಾಗಿ
ಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ ||1||

ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿ
ಇರಲು ಕಾಲಾಖ್ಯ ಉರಗನು ಕಚ್ಚಲು
ಪರಮಭೀತಿಯಿಂದ ಅವಳ ವಸನವ ತಂದು
ವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು ||2||

ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲು
ನಿಲ್ಲದೆ ಸನ್ಮುಕ್ತಿ ಧರನಾಗುವಾ
ಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನ
ಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.