← ಶ್ರೀಹನುಮಂತ

ಏನು ಮರುಳಾದೆಮ್ಮ ಯೆಲ ಭಾರತೀ

📂 ಶ್ರೀಹನುಮಂತ
✍️ ವಿಜಯದಾಸ
🏷️ ಕೀರ್ತನೆಗಳು
ಏನು ಮರುಳಾದೆಮ್ಮ ಯೆಲ ಭಾರತೀ |
ವಾನರ ಕುಲ ನಿಕರ ಶ್ರೇಷ್ಠನಾದವಗೆ

ಕಣ್ಣಿಲ್ಲದಂಜನೆಯ ಉದರದೊಳು ಜನಿಸಿ |
ನಿನ್ನ ತೊರೆದು ಬ್ರಹ್ಮಚಾರಿಯಾಗಿ ||
ಹಣ್ಣಿಗಾಗಿ ಹೋಗಿ ವನವ ಕಿತ್ತೀಡ್ಯಾಡಿ |
ಉಣ್ಣ ಕರದರೆ ಎಂಜಲೆಡೆವೈದ ಕಪಿಗೆ ||1||

ಪುಟ್ಟಿದನು ಗುರುತಲ್ಪಕನ ವಂಶದಲಿ |
ನಟ್ಟಿರುಳೆ ಒಬ್ಬ ಅಸುರಿಯ ಕೂಡಿದಾ ||
ಹೊಟ್ಟೆಗಾಗಿ ಪೋಗಿ ಭಿಕ್ಷದನ್ನವನುಂಡ |
ಅಟ್ಟು ಹಾಕುವನಾದ ಕುಲವ ಕೊಂದವಗೆ ||2||

ಮಂಡೆ ಬೋಳನಾಗಿ ಭೂಮಂಡಲ ಚರಿಸುವ |
ಕಂಡವರಾರು ಈತನ ಗುಣಗಳಾ ||
ಪುಂಡರೀಕಾಕ್ಷ ವಿಜಯವಿಠ್ಠಲನ್ನ |
ಕೊಂಡಾಡುತ ತಾ ಬೋರೆ ಗಿಡದ ಕೆಳಗಿಪ್ಪ ||3||
← ಶ್ರೀಹನುಮಂತ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.