← ಶ್ರೀಕೃಷ್ಣ

ಏಳು ಬೆಳಗಾಯಿತು ಯದುಕುಲೋತ್ತಮ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಏಳು ಬೆಳಗಾಯಿತು ಯದುಕುಲೋತ್ತಮ |
ವಾಲಗಕೆ ಪರಮೇಷ್ಠಿ ಹರ ಸುರಪಾಲಕರು
ಹರ ಸುರಪಾಲಕರು ಬಂದರು ತಮ್ಮಯ
ಆಳುಸಹಿತದಲಿ ರಂಗಾ

ವೇದವನು ತಮ ಕದ್ದು ಒಯ್ದನು |
ಆಧಾರಾಗದೆ ಅದ್ರಿ ಮುಣಗಿತು ||
ಮೇದಿನಿಯ ಬಳಕೊಂಡು ಹೋದನು |
ಅದಿತಿಯ ಸುತನು ಭಾದಿಗಾಗದಲೆ ಬಂದು ಸಕಲರು ||
ಆದರಣೆಯಿಂದ ಕೈಯ ಮುಗಿದು ನೀ |
ದಯಾನಿಧಿ ಎಂದು ಹೊರಗೆ ಕಾದು ಐದಾರೆ ರಂಗ ||1||

ಬಲಿಯ ಅಟ್ಟುಳಿ ಹೆಚ್ಚಿತು ವೆ
ಗ್ಗಳಿಸಿದರು ಛತ್ರಿಯರು ಈರೈದು ತಲೆಯವನು ||
ಬಲವಂತನಾದನು ಆರಿಗೊಶವಿಲ್ಲ |
ಇಳೆಗೆ ಭಾರವು ತೂಕವಾಯಿತು ಕಳ-|
ವಳಗೊಳಲಾರೆವೆನುತಲಿ ಅಳುಕಿ ಭಯದಲಿ |
ನಿಮ್ಮ ಬಾಗಿಲ ಬಳಿಯ ಸಾರಿದರೊ ರಂಗಾ||2||

ಮೂರು ಪುರದವರೀಗ ನಮ್ಮನ್ನ ಮೀರಿದರು |
ಕಲಿಪುರುಷ ಸುಜನರ ಮೇರೆದಪ್ಪಿಸಿ ನಡೆಸಿ ||
ಬಲು ವಿಕಾರ ಮಾಡಿದನು ಈ ರೀತಿ ಶ್ರಮವೆಂದು |
ಪೇಳಲು ಮಾರಪಿತ ಸಿರಿ ವಿಜಯ- ||
ವಿಠ್ಠಲ ಕಾರಣಾರ್ಧವ ಕಳೆದು |
ಮುಂದೆ ಉದ್ಧಾರ ಮಾಡಿದನು ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.