← ಶ್ರೀಕೃಷ್ಣ

ಕಂಗೆಡದಿರು ಮನವೆ ಕಂಗೆಡದಿರು ಒಡನೊಡನೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಕಂಗೆಡದಿರು ಮನವೆ
ಕಂಗೆಡದಿರು ಒಡನೊಡನೆ ನೆರೆದು ಬಂದು

ಜನಕೆ ಗ್ರಾಸವೆಂತಹುದೆಂದು
ಅನುಮಾನ ಹಚ್ಚಿಕೊಂಡು
ಬಡವಾಗದಿರೆಲೆ ಆಲೋಚನೆ ಮಾಡು
ನಿನ್ನೊಳಗೆ ತಿಳಿದು ಮರಳಿ ಮರಳಿ
ಘನಮಹಿಮ ನಾರಾಯಣ ಅನಾದಿ ಸ್ವಾಭಾವಿಕ
ಚಿನುಮಯ ಸತ್ಯಸಂಕಲ್ಪ ದೇವ| ||1||

ಇನಿತು ಜೀವಿಗಳಿಗೆ ಕಾಲಕಾಲಕೆ
ತೃಣ ಮೊದಲಾದ ಗ್ರಾಸ ಮಾಡಿಯಿಪ್ಪಾ
ಕ್ಷಣಮಿರಗೊಡದೆ ಆವಲ್ಲಿಯಿದ್ದರೂ
ವುಣಿಸುವ ಉಚಿತವನ್ನೆ ತಿಳಿದು ನೋಡಿ
ದಿನ ದಿನಕೆ ಅಧಿಕವಿಲ್ಲಾ ತತ್ಪೂರ್ವ ಚೇತನಕೆ
ನಿರ್ಮಾಣ ಮಾಡಿದಂತೆ ಬೊಮ್ಮಾ||2||

ಫಣಿತಿಯಲ್ಲಿ ಬರೆದಿರುವ ಆಯು:ಕರ್ಮವಿದ್ಯಾ
ಧನ ನಿಧಾನನೆನೆಸಿ ಶ್ರೀಹರಿಯ ಆದಿ
ಜನಿಸುವಾಗಲೆ ಅವರವರವಾಡಿಪನಾ
ಕೊನೆಯ ಸೆರಗಿನಲಿ ಕಟ್ಟಿಹನೋ
ನಿನಗೆ ಕಾಣಬಾರದೋ ಪದಶಾಸ್ತ್ರಗಳಿಂದೆ
ಗುಣಿಸಿ ನೋಡಿದರೆ ಕಾರುಣಿಕವಹುದೊ ||3||

ಅಣುಮಾತ್ರನಿಂ ನಿಂದಾ ಆಗುವಾ ಶೌರ್ಯವೇನೋ
ಅನುಭವಕೆ ತಂದುಕೊಂಡು ಗ್ಲಾನಿಯಾಗೋ
ಮಿನುಗು ಚಿಂತೆಗಳಿಂದಾ ಬರುವ ಲಾಭವೇ ಕಾಣೆ
ತನುವ ಶೋಷಿಸಿ ವಿರೋಧಾವಾಗಿ ಕೊಂಬೆ
ಧನವಂತಾ ಸಿರಿ ನಮ್ಮ ವಿಜಯವಿಠಲರೇಯಾ
ಮನುಜಾದಿ ದೇಹಿಗಳಿಗೆ ಸ್ವಾಮಿಯಾಗಿಪ್ಪನೋ ||4||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.