← ಶ್ರೀಕೃಷ್ಣ

ಕಮಲಸಂಭವ ನಾಸಿಕ ಸಂಭವ ಕಾಯೊ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಕಮಲಸಂಭವ ನಾಸಿಕ | ಸಂಭವ ಕಾಯೊ
ನಮಿಸುವೆ ನಿನಗೆ ನಾನು

ಅಂದು ಧರಣಿ ಜಲ ವಂದಾಗಿ ಕರಗಿರೇ |
ನಂದನ ಚಿಂತಿಸಿ ಬಂದ ವರಹಮೂರ್ತಿ ||1||

ಮಧು ಪಾನಾವವ ಸಾ | ದದು ಅವನ ಚರ್ಮ |
ಹೊದಿಸಿ ಹೆಪ್ಪುಗೊಟ್ಟು ಮೇದಿನೆಂದಿಸಿದೆ ||2||

ಕನಕಲೋಚನ ಭೂಮಿಯನು ಕದ್ದು ಮೈಯಲು |
ಅನಿಮಿಷರೊಲಿಸೆ ಅವನ ಕೊಂದುದ್ಧರಿಸಿದೆ||3||

ಕರುಣಾಕಟಾಕ್ಷದಿ ಹೊರವಲ್ಲಿ ನಾನೆಲ್ಲಿ |
ಸರಿಗಾಣೆ ನಿನಗೆ ಅಂತರ ಬಹಿರದೊಳು ||4||

ರಜೋಭಿಮಾನಿಯ ವಡಿಯಾ ಸುಜನಪಾಲಾ |
ಭುಜಗ ಗಿರಿಯ ವಾಸಾ ವಿಜಯವಿಠ್ಠಲಾಧೀಶಾ ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.